ವಾಷಿಂಗ್ಟನ್(ಅಮೆರಿಕ): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಲ್ಲಿನ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಧಾನ ಕಚೇರಿಯಲ್ಲಿ ಸಂವಾದ ನಡೆಸುತ್ತಾ, 'ಹೂಡಿಕೆದಾರರಿಗೆ ಭಾರತಕ್ಕಿಂತ ಹೆಚ್ಚು ಉತ್ತಮವಾದ ದೇಶ ಬೇರೊಂದಿಲ್ಲ' ಎಂದು ಹೂಡಿಕೆಗೆ ಆಹ್ವಾನಿಸಿದರು.
ಹೂಡಿಕೆದಾರರಿಗೆ ಭಾರತಕ್ಕಿಂತ ಪ್ರಾಶಸ್ತ ದೇಶ ಮತ್ತೊಂದಿಲ್ಲ: ಸೀತಾರಾಮನ್ - IMF
ಹೂಡಿಕೆದಾರರಿಗೆ ಭಾರತಕ್ಕಿಂತ ಹೆಚ್ಚು ಉತ್ತಮವಾದ ದೇಶ ಬೇರೊಂದಿಲ್ಲ. ಪ್ರಜಾಪ್ರಭುತ್ವದ ಆಸೆಗಳನ್ನು ಪ್ರೀತಿಸುವ, ಬಂಡವಾಳ ಹೂಡಿಕೆದಾರರನ್ನು ಗೌರವಿಸುವಂತಹ ವಾತಾವರಣ ಭಾರತ ಹೊಂದಿದೆ. ಬಂಡವಾಳ ಹೂಡಿಕೆಗೆ ಭಾರತ ಪ್ರಾಶಸ್ತ ಪ್ರದೇಶ. ಜನರ ಮತ್ತು ಆರ್ಥಿಕತೆ ಸುಧಾರಣೆಗೆ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಭಾರತಕ್ಕೆ ಬಂದು ಬಂಡವಾಳ ಹೂಡುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಐಎಂಎಫ್ ಕಚೇರಿಯಲ್ಲಿ ಕರೆ ನೀಡಿದರು.
ಪ್ರಜಾಪ್ರಭುತ್ವದ ಆಸೆಗಳನ್ನು ಪ್ರೀತಿಸುವ, ಬಂಡವಾಳ ಹೂಡಿಕೆದಾರರನ್ನು ಗೌರವಿಸುವಂತಹ ವಾತಾವರಣ ಭಾರತ ಹೊಂದಿದೆ. ಬಂಡವಾಳ ಹೂಡಿಕೆಗೆ ಭಾರತ ಪ್ರಾಶಸ್ತ ಪ್ರದೇಶ. ಜನರ ಮತ್ತು ಆರ್ಥಿಕತೆ ಸುಧಾರಣೆಗೆ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ.
ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ. ಕೌಶಲ್ಯಯುಕ್ತ ಹೇರಳ ಮಾನವ ಸಂಪನ್ಮೂಲಗಳನ್ನು ಹೊಂದಿದೆ. ಯಾವ ವಲಯದಲ್ಲಿ ಸುಧಾರಣೆ ಕಾಣಬೇಕೋ ಆ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ. ಭಾರತದ ನ್ಯಾಯಾಲಯದ ಕಲಾಪಗಳಲ್ಲಿ ವಿಳಂಬವಾಗಿದ್ದರೂ ಪಾರದರ್ಶಕ ಮತ್ತು ಸ್ವತಂತ್ರ ಸಮಾಜವನ್ನು ಒಳಗೊಂಡಿದೆ. ಕಾನೂನು ಪಾಲನೆಯಲ್ಲಿ ಸಾಕಷ್ಟು ಸುಧಾರಣೆಗಳಾಗುತ್ತಿವೆ ಎಂದು ತಿಳಿಸಿದ್ದಾರೆ.