ಕರ್ನಾಟಕ

karnataka

ETV Bharat / business

ಚೀನಾ ಮಾದರಿ ಗುಜರಾತ್; ರಫ್ತಿನಲ್ಲೂ ಮೋದಿ ತವರು ದೇಶದಲ್ಲಿ ನಂ.1 ರಾಜ್ಯ! - ನೀತಿ ಆಯೋಗ ರಫ್ತು ಸನ್ನದ್ಧತೆ ಸೂಚ್ಯಂಕ

ರ್ಯಾಂಕಿಂಗ್ ಡ್ರಾಯಿಂಗ್ ಬಿಸಿನೆಸ್ ಆಧಾರಿತ ದೇಶದ ಪ್ರಥಮ ರಫ್ತು ಸಿದ್ಧತೆ ಸೂಚ್ಯಂಕದಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳನ್ನು ಹಿಂದಿಕ್ಕಿದ ಗುಜರಾತ್​ ಅಗ್ರ ಸ್ಥಾನದಲ್ಲಿದೆ. ರಫ್ತು ಸನ್ನದ್ಧತೆ ಸೂಚ್ಯಂಕ ಶ್ರೇಯಾಂಕಕ್ಕೆ ನೀತಿ ಅಯೋಗ 50 ಮಾನದಂಡಗಳನ್ನು ನಿಗದಿಪಡಿಸಿತ್ತು. ರಫ್ತು ಸನ್ನದ್ಧತೆಯಲ್ಲಿ ಗುಜರಾತ್ 75.19 ಅಂಕ ಗಳಿಸಿದೆ.

export preparedness
ರಫ್ತು

By

Published : Aug 28, 2020, 9:19 PM IST

ಅಹಮದಾಬಾದ್:ನೀತಿ ಅಯೋಗ ಪ್ರಕಟಿಸಿದ ರಫ್ತು ಸನ್ನದ್ಧತೆ ಸೂಚ್ಯಂಕ ವರದಿ-2020ರ ಪ್ರಕಾರ ಗುಜರಾತ್ ದೇಶದಲ್ಲಿ ಪ್ರಥಮ ಸ್ಥಾನ ಪಡೆದಿದೆ.

ರ್ಯಾಂಕಿಂಗ್ ಡ್ರಾಯಿಂಗ್ ಬಿಸಿನೆಸ್ ಆಧರಿತ ದೇಶದ ಪ್ರಥಮ ರಫ್ತು ಸಿದ್ಧತೆ ಸೂಚ್ಯಂಕದಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳನ್ನು ಹಿಂದಿಕ್ಕಿದ ಗುಜರಾತ್​ ಅಗ್ರ ಸ್ಥಾನದಲ್ಲಿದೆ. ರಫ್ತು ಸನ್ನದ್ಧತೆ ಸೂಚ್ಯಂಕ ಶ್ರೇಯಾಂಕಕ್ಕೆ ನೀತಿ ಅಯೋಗ 50 ಮಾನದಂಡಗಳನ್ನು ನಿಗದಿಪಡಿಸಿತ್ತು. ರಫ್ತು ಸನ್ನದ್ಧತೆಯಲ್ಲಿ ಗುಜರಾತ್ 75.19 ಅಂಕ ಗಳಿಸಿದೆ.

ಗುಜರಾತ್ ಬಿಸಿನೆಸ್ ಇಕೋಸಿಸ್ಟಮ್ ಪಿಲ್ಲರ್​​ನಲ್ಲಿ ಶೇ 90.61 ಅಂಕ ಗಳಿಸಿ ದೇಶದಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ನೀತಿ, ರಫ್ತು ಪರಿಸರ ವ್ಯವಸ್ಥೆ ಮತ್ತು ರಫ್ತು ಕಾರ್ಯಕ್ಷಮತೆಯ ಸ್ತಂಭದಂತಹ ಮೂರು ಪ್ರಮುಖ ಮಾನದಂಡಗಳಲ್ಲಿ ಹಿಂದುಳಿದಿದೆ.

ರಫ್ತು ಉತ್ತೇಜನ ನೀತಿ, ವ್ಯಾಪಾರ ವಾತಾವರಣ, ಆರ್&ಡಿ ಗೆ ಬೆಂಬಲ, ರಫ್ತು ವೈವಿಧ್ಯೀಕರಣ, ಮೂಲಸೌಕರ್ಯ ಮತ್ತು ಸಾರಿಗೆ ಸಂಪರ್ಕದಲ್ಲಿ ಗುಜರಾತ್ ಮುಂಚೂಣಿಯಲ್ಲಿದೆ.

ಗುಜರಾತ್ ಜನಸಂಖ್ಯಾ- ಭೂ ಅನುಪಾತದಲ್ಲಿ ಶೇ 6ರಷ್ಟು ಮತ್ತು ದೇಶದ ಜನಸಂಖ್ಯೆಯ ಪಾಲಿನಲ್ಲಿ 5 ಪ್ರತಿಶತದಷ್ಟು ಪಾಲು ಹೊಂದಿದೆ. ತಮ್ಮ ಡಿಎನ್‌ಎನಲ್ಲಿ ಉದ್ಯಮಶೀಲತೆ ಮತ್ತು ವ್ಯಾಪಾರ ದಕ್ಷತೆಯನ್ನು ಹೊಂದಿದ ರಾಜ್ಯ ಎಂಬುದನ್ನು ಗುಜರಾತ್ ಸಾಬೀತುಪಡಿಸಿದ್ದು, ದೇಶದ ಜಿಡಿಪಿಯಲ್ಲಿ ಶೇ 8ರಷ್ಟು ಮತ್ತು ಕೈಗಾರಿಕಾ ಉತ್ಪಾದನೆಯಲ್ಲಿ ಶೇ 17ರಷ್ಟು ಕೊಡುಗೆ ನೀಡುತ್ತಿದೆ. ಚೀನಾ ಕೂಡ ಕೈಗಾರಿಕಾ ಉತ್ಪನ್ನಗಳ ರಫ್ತು ಮೂಲಕ ಜಗತ್ತಿನಲ್ಲಿ ಅತಿಹೆಚ್ಚು ಸಾಗರೋತ್ತರ ಆದಾಯ ತಂದುಕೊಳ್ಳುತ್ತಿದೆ. ಅದೇ ಮಾದರಿಯಲ್ಲಿ ಪ್ರಧಾನಿ ಮೋದಿ ತವರು ರಾಜ್ಯ ಸಾಗುತ್ತಿದೆ.

1,600 ಕಿಮೀ ಉದ್ದದ ಆಯಕಟ್ಟಿನ ಕರಾವಳಿ ಹೊಂದಿರುವ ಗುಜರಾತ್, ಕಡಲ ವ್ಯಾಪಾರ ಮತ್ತು ವಾಣಿಜ್ಯ ವಹಿವಾಟಿನ ‘ಜಗತ್ತಿಗೆ ಗೇಟ್‌ವೇ’ ಆಫ್​ ಇಂಡಿಯಾ ಆಗಿ ಮಾರ್ಪಟ್ಟಿದೆ. 48 ದೊಡ್ಡ ಬಂದರುಗಳನ್ನು ಹೊಂದಿದ್ದು, ದೇಶದ ರಫ್ತಿನ ಶೇ 20ರಷ್ಟು ಇದೊಂದೇ ರಾಜ್ಯದಿಂದ ನಡೆಯುತ್ತಿದೆ. 180 ದೇಶಗಳಿಗೆ ಸರಕು ಮತ್ತು ಸೇವೆಗಳನ್ನು ಒದಗಿಸಲಾಗುತ್ತಿದೆ.

ABOUT THE AUTHOR

...view details