ನವದೆಹಲಿ:ಹೂಡಿಕೆ ಪ್ರಕ್ರಿಯೆಯ ಭಾಗವಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಖಾಸಗೀಕರಣಗೊಳ್ಳಲು ಎರಡು ಸಾರ್ವಜನಿಕ ವಲಯದ ಬ್ಯಾಂಕ್ಗಳು (ಪಿಎಸ್‌ಬಿ) ಮತ್ತು ಒಂದು ಸಾರ್ವಜನಿಕ ವಲಯದ ವಿಮೆದಾರರ ಹೆಸರನ್ನು ನೀತಿ ಆಯೋಗ ಸರ್ಕಾರಕ್ಕೆ ಸಲ್ಲಿಸಿದೆ.
ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ (ಡಿಐಪಿಎಎಂ) ಮತ್ತು ಹಣಕಾಸು ಸೇವೆಗಳ ಇಲಾಖೆ (ಡಿಎಫ್‌ಎಸ್) ನೀತಿ ಆಯೋಗ ಸೂಚಿಸಿದ ಹೆಸರುಗಳನ್ನು ಪರಿಶೀಲಿಸುತ್ತದೆ. ಈ ವರ್ಷ ಖಾಸಗೀಕರಣಕ್ಕಾಗಿ ಹಣಕಾಸು ಕ್ಷೇತ್ರದಲ್ಲಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಸೆಂಟ್ರಲ್ ಬ್ಯಾಂಕ್ ಖಾಸಗೀಕರಣಕ್ಕೆ ಒಲವು ತೋರಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಆದರೆ, ಭಾರತೀಯ ಸಾಗರೋತ್ತರ ಬ್ಯಾಂಕ್ ಸಹ ಈ ವರ್ಷ ಅಥವಾ ಮುಂದಿನ ದಿನಗಳಲ್ಲಿ ಒಲವು ತೋರಬಹುದು ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ, ಯುನೈಟೆಡ್ ಇಂಡಿಯಾ ವಿಮೆಯನ್ನು ಮೂರು ಸಾಮಾನ್ಯ ವಿಮಾದಾರರಲ್ಲಿ ಖಾಸಗೀಕರಣದ ಅಭ್ಯರ್ಥಿಯಾಗಿ ಆಯ್ಕೆ ಮಾಡಬಹುದು. ಹಣಕಾಸು ವಲಯದ ತಜ್ಞರು ಈ ಮೂವರಲ್ಲಿ ಕನಿಷ್ಠ ಋಣಪರಿಹಾರ ಅನುಪಾತ ಹೊಂದಿರುವ ಓರಿಯಂಟಲ್ ಇನ್ಶುರೆನ್ಸ್ಗೆ ಸಾಗರೋತ್ತರ ಕಾರ್ಯಾಚರಣೆಗಳನ್ನು ಹೊಂದಿರದ ಕಾರಣ ಅನುಕೂಲವಾಗಬಹುದು. ಖಾಸಗಿ ಹೂಡಿಕೆದಾರರನ್ನು ಆಹ್ವಾನಿಸುವುದೂ ಸುಲಭ ಆಗಬಹುದು ಎಂದರು.
ಪ್ರಾಂಪ್ಟ್ ಕೋಆಪರೆಟಿವ್ ಆ್ಯಕ್ಷನ್ (ಪಿಸಿಎ) ಚೌಕಟ್ಟಿನಲ್ಲಿ ಇರುವ ಬ್ಯಾಂಕ್ಗಳು ಅಥವಾ ದುರ್ಬಲ ಬ್ಯಾಂಕ್ಗಳನ್ನು ಖಾಸಗೀಕರಣದಿಂದ ಹೊರಗಿಡಲಾಗುವುದು ಎಂದು ಸರ್ಕಾರ ಈ ಹಿಂದೆ ಸೂಚಿಸಿತ್ತು. ಅವುಗಳು ಖರೀದಿದಾರರು ನಿರಾಸಕ್ತಿ ತಳಿಹಬಹುದು ಎಂಬ ಲೆಕ್ಕಾಚಾರ ಸರ್ಕಾರದ್ದು.