ಮುಂಬೈ:ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ಸುಮಾರು 14ಸಾವಿರ ಕೋಟಿ ರೂ. ಸಾಲ ಪಡೆದು ವಂಚಿಸಿ ಪಲಾಯನಗೈದ ವಜ್ರೋದ್ಯಮಿ ನೀರವ್ ಮೋದಿಗೆ ಸೇರಿದ್ದ ಅಮೂಲ್ಯ ಕಲಾಕೃತಿಗಳನ್ನು ಆದಾಯ ತೆರಿಗೆ ಇಲಾಖೆ ಹರಾಜಿನಲ್ಲಿ ಮಾರಾಟ ಮಾಡಿದೆ.
ಕೋರ್ಟ್ನ ಆದೇಶದ ಮೇರೆಗೆ ಸರ್ಕಾರಿ ತನಿಖಾ ಸಂಸ್ಥೆಗಳು ನೀರವ್ಗೆ ಸೇರಿದ್ದ ಕಲಾಕೃತಿಗಳನ್ನು ಜಪ್ತಿ ಮಾಡಿದ್ದು, ಮುಂಬೈನಲ್ಲಿ ಅದನ್ನು ಹರಾಜಿಗೆ ಇಡಲಾಗಿತ್ತು. ಆದಾಯ ತೆರಿಗೆ ಇಲಾಖೆಯು ತೆರಿಗೆ ಪುನರ್ ಪಾವತಿ ಅಧಿಕಾರಿಯ ಪರವಾಗಿ 68 ವರ್ಣಚಿತ್ರಗಳನ್ನು ಹರಾಜು ಹಾಕಿ ₹ 59.37 ಕೋಟಿ ಪಡೆದಿದೆ.
ಪಿಎನ್ಬಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ನೀರವ್, ಜಾರಿ ನಿರ್ದೇಶನಾಲಯ ಅವರಿಂದ ವಶಕ್ಕೆ ಪಡೆದು, ಈ ವರ್ಣಚಿತ್ರಗಳನ್ನು ಹರಾಜು ಮಾಡಲು ಇಲಾಖೆಯು ನ್ಯಾಯಾಲಯದ ಅನುಮತಿ ಕೇಳಿದ್ದು ಅನುಮತಿ ಸಿಕ್ಕ ಬಳಿಕ ಈ ಹರಾಜು ನಡೆದಿದೆ.
ನೀರವ್ ಮೋದಿಯನ್ನು ಲಂಡನ್ನಲ್ಲಿ ಕಳೆದ ವಾರವಷ್ಟೇ ಬಂಧಿಸಿದ್ದು, ಅವರ ಜಾಮೀನು ಅರ್ಜಿ ಸಹ ತಿರಸ್ಕೃತಗೊಂಡಿದೆ. ಮುಂದಿನ ವಿಚಾರಣೆಯು ಮಾರ್ಚ್ 29ಕ್ಕೆ ನಿಗದಿಯಾಗಿದ್ದು, ಲಂಡನ್ ಕಾರಾಗೃಹದಲ್ಲಿ ಸಾಮಾನ್ಯ ಖೈದಿಗಳ ಜೊತೆಗೆ ನೀರವ್ ಮೋದಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.