ಕರ್ನಾಟಕ

karnataka

ETV Bharat / business

ಹೊಸ IT ಇ-ಫೈಲಿಂಗ್ ಪೋರ್ಟಲ್​ನಲ್ಲಿ ದೋಷ: ನಿರ್ಮಲಾ ಹೇಳಿಕೆಗೆ ನಿಲೇಕಣಿ ವಿವರಣೆ

ಹೊಸ ಇ-ಫೈಲಿಂಗ್ ಪೋರ್ಟಲ್ ಫೈಲಿಂಗ್ ಪ್ರಕ್ರಿಯೆ ಸರಾಗಗೊಳ್ಳುತ್ತಿದೆ. ಇದು ಅಂತಿಮ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ, ನಾವು ಮೊದಲ ದಿನದ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಗಮನಿಸಿದ್ದೇವೆ ಮತ್ತು ಅವುಗಳನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದೇವೆ. ಇನ್ಫೋಸಿಸ್ ಈ ಆರಂಭಿಕ ತೊಂದರೆಗಳಿಗೆ ವಿಷಾದ ವ್ಯಕ್ತಪಡಿಸುತ್ತದೆ. ವಾರದಲ್ಲಿ ವ್ಯವಸ್ಥೆಯನ್ನು ಸ್ಥಿರಗೊಳಿಸುವ ನಿರೀಕ್ಷೆಯಿದೆ ಎಂದು ನಂದನ್‌ ನಿಲೇಕಣಿ ಟ್ವೀಟ್ ಮಾಡಿದ್ದಾರೆ.

Nilekani
Nilekani

By

Published : Jun 9, 2021, 9:54 AM IST

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಿರ್ದೇಶನದ ನಂತರ, ಹೊಸ ಇ-ಫೈಲಿಂಗ್ ಆದಾಯ ತೆರಿಗೆ ವೇದಿಕೆ ಪ್ರಾರಂಭಿಸಿದ ಮೊದಲ ದಿನದಂದು ಗಮನಿಸಿದ ಸಮಸ್ಯೆಗಳನ್ನು ಪರಿಹರಿಸಲು, ತಾವು ಮತ್ತು ತಮ್ಮ ತಂಡ ಕಾರ್ಯನಿರತವಾಗಿದೆ' ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಮತ್ತು ಅಧ್ಯಕ್ಷ ನಂದನ್ ನಿಲೇಕಣಿ ಹೇಳಿದ್ದಾರೆ.

ಹೊಸ ಇ-ಫೈಲಿಂಗ್ ಪೋರ್ಟಲ್ ಫೈಲಿಂಗ್ ಪ್ರಕ್ರಿಯೆ ಸರಾಗಗೊಳ್ಳುತ್ತಿದೆ ಮತ್ತು ಅಂತಿಮ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ. ನಾವು ಮೊದಲ ದಿನದ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಗಮನಿಸಿದ್ದೇವೆ ಮತ್ತು ಅವುಗಳನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದೇವೆ. ಇನ್ಫೋಸಿಸ್ ಈ ಆರಂಭಿಕ ತೊಂದರೆಗಳಿಗೆ ವಿಷಾದ ವ್ಯಕ್ತಪಡಿಸುತ್ತದೆ. ವಾರದಲ್ಲಿ ವ್ಯವಸ್ಥೆಯನ್ನು ಸ್ಥಿರಗೊಳಿಸುವ ನಿರೀಕ್ಷೆಯಿದೆ ಎಂದು ನಿಲೇಕಣಿ ಟ್ವೀಟ್ ಮಾಡಿದ್ದಾರೆ.

ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲು ಅವರು ಈ ಹಿಂದೆ ಇನ್ಫೋಸಿಸ್ ಮತ್ತು ನಿಲೇಕಣಿಯನ್ನು ಕೇಳಿದ್ದರು.

ಹೊಸ ಆದಾಯ ತೆರಿಗೆ ಸಲ್ಲಿಸುವ ಪೋರ್ಟಲ್ ಇ-ಫೈಲಿಂಗ್ ಪೋರ್ಟಲ್ 2.0 ಅನ್ನು ಸೋಮವಾರ ಪ್ರಾರಂಭಿಸಲಾಯಿತು. ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಸಂಬಂಧಿಸಿದಂತೆ ತಾನು ಕುಂದುಕೊರತೆ ಮತ್ತು ತೊಂದರೆಗಳನ್ನು ಸ್ವೀಕರಿಸುತ್ತಿದ್ದೇನೆ. ತೆರಿಗೆ ಪಾವತಿದಾರರಿಗೆ ಅನುಸರಣೆಯಲ್ಲಿ ಸುಲಭವಾಗುವುದು ಕೇಂದ್ರಕ್ಕೆ ಮೊದಲ ಆದ್ಯತೆಯಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದರು.

ಇದನ್ನೂ ಓದಿ: GDP ವೃದ್ಧಿ ಅಂದಾಜು ಶೇ 8.3ಕ್ಕೆ ಇಳಿಕೆ: ಆದ್ರೂ 80 ವರ್ಷಗಳ ಆರ್ಥಿಕ ಹಿಂಜರಿತದಲ್ಲಿ ವೇಗದ ಬೆಳವಣಿಗೆ

ಬಹುನಿರೀಕ್ಷಿತ ಇ-ಫೈಲಿಂಗ್ ಪೋರ್ಟಲ್ 2.0 ಕಳೆದ ರಾತ್ರಿ 20: 45 ಗಂಟೆಗೆ ಪ್ರಾರಂಭಿಸಲಾಯಿತು. ಟಿಎಲ್ ಕುಂದುಕೊರತೆ ಮತ್ತು ತೊಂದರೆಗಳನ್ನು ನಾನು ಕಂಡಿದ್ದೇನೆ. ಇನ್ಫೋಸಿಸ್ ಮತ್ತು ನಂದನ್ ನಿಲೇಕಣಿ ನಮ್ಮ ತೆರಿಗೆದಾರರನ್ನು ಸೇವೆಯ ಗುಣಮಟ್ಟದಲ್ಲಿ ನಿರಾಸೆ ಮಾಡುವುದಿಲ್ಲ ಎಂಬ ಭರವಸೆಯಿದೆ. ತೆರಿಗೆ ಪಾವತಿದಾರರಿಗೆ ಸುಲಭವಾಗಿ ಅನುಸರಣೆ ಮಾಡುವುದು ನಮ್ಮ ಆದ್ಯತೆಯಾಗಿರಬೇಕು ಎಂದು ನಿರ್ಮಲಾ ಸೀತಾರಾಮನ್​ ಟ್ವೀಟ್ ಮಾಡಿದ್ದರು.

ಕೆಲವು ಬಳಕೆದಾರರು ಹೊಸ ಪೋರ್ಟಲ್‌ನಲ್ಲಿ ಲೋಡಿಂಗ್​ ಸಾಮಾನ್ಯಕ್ಕಿಂತ ಹೆಚ್ಚು ಸಮಯ ತಗುಲಿದೆ ಎಂದು ಕೆಲವು ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ದೂರಿದ್ದಾರೆ. ಆದಾಗ್ಯೂ, ಕೆಲವರು ಹೊಸ ಸೌಲಭ್ಯಗಳನ್ನು ಶ್ಲಾಘಿಸಿದ್ದಾರೆ.

ABOUT THE AUTHOR

...view details