ನವದೆಹಲಿ:ಹೊಸ ತಿಂಗಳು ಆರಂಭವಾಗುತ್ತಿದೆ. ಜೊತೆಗೆ ಹೊಸ ನಿಯಮ, ಹೊಸ ಬದಲಾವಣೆ ಸಹ ಈ ತಿಂಗಳಲ್ಲೇ ಆಗುತ್ತಿದೆ. ಈ ಬದಲಾವಣೆಗಳು ಸಾಮಾನ್ಯ ಜನರಿಗೂ ಅನ್ವಯವಾಗುತ್ತಿವೆ. ಸೆಪ್ಟೆಂಬರ್ 1ರಿಂದ ದೇಶದಲ್ಲಿ ಕೆಲ ಬದಲಾವಣೆಯಾಗುತ್ತಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಹೊಸ ರೂಲ್ಸ್
ನಿಮ್ಮದೇನಾದರೂ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದರೆ ಇತ್ತ ಗಮನಕೊಡಿ. ಸೆಪ್ಟೆಂಬರ್ 1ರಿಂದ ಉಳಿತಾಯ ಖಾತೆ ಮೇಲಿನ ಬಡ್ಡಿ ದರವನ್ನ ಬ್ಯಾಂಕ್ ಕಡಿತಗೊಳಿಸುತ್ತಿದೆ. ವಾರ್ಷಿಕ ಶೇ.0.10ರಷ್ಟು ಬಡ್ಡಿದರ ಕಡಿತಗೊಳಿಸಲು ಬ್ಯಾಂಕ್ ನಿರ್ಧರಿಸಿದ್ದು, ಶೇ.3ರಿಂದ 2.90ಕ್ಕೆ ಇಳಿಸಿದೆ.
ಜಿಎಸ್‌ಟಿ ರಿಟರ್ನ್ ಹೊಸ ನಿಯಮ
ಜಿಎಸ್‌ಟಿ ಸಂಗ್ರಹದಲ್ಲಿ ಕುಸಿತ ಗಮನದಲ್ಲಿಟ್ಟುಕೊಂಡಿರುವ ಕೇಂದ್ರ ಸರ್ಕಾರ ವಿಳಂಬ ಪಾವತಿದಾರರ ಮೇಲೆ ಹದ್ದಿನ ಕಣ್ಣಿಡಲು ಸಿದ್ಧತೆ ನಡೆಸಿದೆ. ಒಂದು ವೇಳೆ ನಿಗದಿತ ಸಮಯದಲ್ಲಿ ಜಿಎಸ್‌ಟಿ ಪಾವತಿಸದಿದ್ದರೆ ನಿವ್ವಳ ತೆರಿಗೆ ಮೇಲೆ ಬಡ್ಡಿ ವಿಧಿಸಲು ಕೇಂದ್ರ ನಿರ್ಧರಿಸಿದೆ. ಈ ನಿಯಮ ಸಹ ಸೆ.1ರಿಂದಲೇ ಜಾರಿಯಾಗುತ್ತಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಯಲ್ಲಿ ವಿಳಂಬವಾದರೆ, ಸೆಪ್ಟೆಂಬರ್ 1ರಿಂದ ಒಟ್ಟು ತೆರಿಗೆ ಮೇಲೆ ಬಡ್ಡಿ ವಿಧಿಸಲಾಗುವುದು ಎಂದು ಸರ್ಕಾರ ಹೇಳಿದೆ.