ನವದೆಹಲಿ:ಮಿಂತ್ರ (Myntra) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರ್ ನಗರಂ, ಮೂರು ವರ್ಷಗಳ ಫ್ಯಾಷನ್ ಇ - ಕಾಮರ್ಸ್ ಪ್ಲಾಟ್‌ಫಾರ್ಮ್ ಅನ್ನು ಮುನ್ನಡೆಸಿದ ನಂತರ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಮತ್ತು ಸ್ವಂತ ಉದ್ಯಮವನ್ನು ಮುಂದುವರಿಸಲಿದ್ದಾರೆ.
ಫ್ಲಿಪ್‌ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಅವರು ಉದ್ಯೋಗಿಗಳಿಗೆ ನೀಡಿದ ಇಮೇಲ್ ಪ್ರಕಾರ, ಸುಗಮ ಪರಿವರ್ತನೆಗಾಗಿ ನಗರಮ್ ಡಿಸೆಂಬರ್ ಅಂತ್ಯದವರೆಗೆ ಮಿಂತ್ರದಲ್ಲಿರುತ್ತಾರೆ ಮತ್ತು ಸಲಹಾ ಪಾತ್ರದಲ್ಲಿ ಮುಂದುವರಿಯುತ್ತಾರೆ ಎಂದು ಸ್ಪಷ್ಟಪಡಿಸಿದರು.
ಸುಮಾರು ಮೂರು ವರ್ಷಗಳ ಕಾಲ ಮಿಂತ್ರವನ್ನು ಮುನ್ನಡೆಸಿದ ನಂತರ, ಅಮರ್ ತಮ್ಮ ಸ್ವಂತ ಉದ್ಯಮವನ್ನು ಮುಂದುವರಿಸಲು ಫ್ಲಿಪ್‌ಕಾರ್ಟ್ ಸಮೂಹವನ್ನು ತೊರೆಯಲು ನಿರ್ಧರಿಸಿದ್ದಾರೆ. ನಿಮ್ಮಲ್ಲಿ ಅನೇಕರಿಗೆ ತಿಳಿದಿರುವಂತೆ, ಅಮರ್ ಸುಮಾರು 10 ವರ್ಷಗಳಿಂದ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಫ್ಲಿಪ್‌ಕಾರ್ಟ್‌ನಲ್ಲಿ ವಿವಿಧ ತಂಡಗಳನ್ನು ಮುನ್ನಡೆಸಿದ್ದಾರೆ. ನಾವು ತಂಡದಲ್ಲಿ ಅವರ ಉಪಸ್ಥಿತಿಯನ್ನು ಕಳೆದುಕೊಳ್ಳುತ್ತೇವೆ 'ಎಂದು ಇಮೇಲ್ ಮೂಲಕ ಸಿಬ್ಬಂದಿಗೆ ಕಳಿಸಲಾಗಿದೆ.