ಕರ್ನಾಟಕ

karnataka

ETV Bharat / business

ಮುಂಬೈನಲ್ಲಿ ಜನಿಸಿದ್ದ ಸಹೋದರರು ಭಾರತವನ್ನಾಳಿದ್ದ ಬ್ರಿಟನ್​ನಲ್ಲಿ ಈಗ ಟಾಪ್​ ಆಗರ್ಭ ಶ್ರೀಮಂತರು!

ಮುಂಬೈ ಮೂಲದ ಸಹೋದರರಾದ ಡೇವಿಡ್ ಮತ್ತು ಸೈಮನ್ ರೂಬೆನ್ 21.5 ಶತಕೋಟಿ ಪೌಂಡ್‌ಗಳ ಒಟ್ಟು ಸಂಪತ್ತಿನೊಂದಿಗೆ ಬ್ರಿಟನ್‌ನ ಎರಡನೇ ಶ್ರೀಮಂತರಾಗಿದ್ದಾರೆ. ಭಾರತದ ಸ್ಟೀಲ್ ಮ್ಯಾಗ್ನೇಟ್ ಲಕ್ಷ್ಮಿ ಮಿತ್ತಲ್ ಕಳೆದ ವರ್ಷದ ನಂ.19 ನೇ ಸ್ಥಾನದಿಂದ ಈ ವರ್ಷ 5ನೇ ಸ್ಥಾನಕ್ಕೆ ಏರಿದ್ದಾರೆ. ಮಿತ್ತಲ್ ಅವರ ಸಂಪತ್ತು 7.899 ಬಿಲಿಯನ್ ಪೌಂಡ್​ ಹೆಚ್ಚಳದಿಂದ 14.68 ಬಿಲಿಯನ್ ಪೌಂಡ್​ಗೆ ತಲುಪಿದೆ..

rupen brothers
rupen brothers

By

Published : May 22, 2021, 3:53 PM IST

ನವದೆಹಲಿ :ಬ್ರಿಟಿಷ್ ಇತಿಹಾಸದಲ್ಲಿ ಪ್ರಸ್ತುತ ವರ್ಷದಲ್ಲಿ ಹೆಚ್ಚಿನ ಜನರು ಕೋಟ್ಯಾಧಿಪತಿಗಳಾಗಿದ್ದಾರೆ ಎಂದು ವರದಿಯೊಂದು ಹೇಳಿದೆ.

ಇಂಗ್ಲೆಂಡ್​ನ ಸಂಡೇ ಟೈಮ್ಸ್ ಈ ವರ್ಷದ ಶ್ರೀಮಂತರ ಪಟ್ಟಿ ವರದಿ ಮಾಡಿದೆ. ಇದು ದಾಖಲೆಯ 171 ಯುಕೆ ಬಿಲಿಯನೇರ್‌ಗಳನ್ನು ಗುರುತಿಸುತ್ತದೆ. 2020ಕ್ಕೆ ಹೋಲಿಸಿದರೆ 24 ಕುಬೇರರು ಹೆಚ್ಚಳವಾಗಿದ್ದಾರೆ.

ಸಂಡೇ ಟೈಮ್ಸ್ ಯುಕೆನ ಅತ್ಯಂತ ಶ್ರೀಮಂತ ಜನರ ಅದೃಷ್ಟ ಪತ್ತೆಹಚ್ಚಿದ್ದು, ಈ ವರ್ಷದ ಸಂಖ್ಯೆಯು ಕಳೆದ 33 ವರ್ಷಗಳಲ್ಲಿ ಅತಿದೊಡ್ಡ ಜಿಗಿತವಾಗಿದೆ.

ಈ ಶ್ರೀಮಂತ ಪಟ್ಟಿಯಲ್ಲಿನ ಕೋಟ್ಯಾಧಿಪತಿಗಳ ಒಟ್ಟು ಶೇ. 22ರಷ್ಟು ಹೆಚ್ಚಳಗೊಂಡು 597.269 ಬಿಲಿಯನ್ ಪೌಂಡ್‌ಗಳಿಗೆ ತಲುಪಿದೆ.

ಈ ಪಟ್ಟಿಯಲ್ಲಿ ಉಕ್ರೇನಿಯನ್​ ಮೂಲದ ಉದ್ಯಮಿ ಸರ್ ಲೆನ್ ಬ್ಲಾವಟ್ನಿಕ್ ಅವರು ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಹಿಂದಿನ ಸೋವಿಯತ್ ಒಕ್ಕೂಟದ ಎನರ್ಜಿ ಮತ್ತು ಅಲ್ಯೂಮಿನಿಯಂ ಸಮೂಹಗಳಿಂದ ಹಣ ಸಂಪಾದಿಸಿದರು. 2015ರಲ್ಲಿ ಅಗ್ರ ಸ್ಥಾನದಲ್ಲಿದ್ದರು.

ಮುಂಬೈ ಮೂಲದ ಸಹೋದರರಾದ ಡೇವಿಡ್ ಮತ್ತು ಸೈಮನ್ ರೂಬೆನ್ 21.5 ಶತಕೋಟಿ ಪೌಂಡ್‌ಗಳ ಒಟ್ಟು ಸಂಪತ್ತಿನೊಂದಿಗೆ ಬ್ರಿಟನ್‌ನ ಎರಡನೇ ಶ್ರೀಮಂತರಾಗಿದ್ದಾರೆ.

ಭಾರತದ ಸ್ಟೀಲ್ ಮ್ಯಾಗ್ನೇಟ್ ಲಕ್ಷ್ಮಿ ಮಿತ್ತಲ್ ಕಳೆದ ವರ್ಷದ ನಂ.19 ನೇ ಸ್ಥಾನದಿಂದ ಈ ವರ್ಷ 5ನೇ ಸ್ಥಾನಕ್ಕೆ ಏರಿದ್ದಾರೆ. ಮಿತ್ತಲ್ ಅವರ ಸಂಪತ್ತು 7.899 ಬಿಲಿಯನ್ ಪೌಂಡ್​ ಹೆಚ್ಚಳದಿಂದ 14.68 ಬಿಲಿಯನ್ ಪೌಂಡ್​ಗೆ ತಲುಪಿದೆ.

ಶ್ರೀಚಂದ್ ಮತ್ತು ಗೋಪಿಚಂದ್ ಹಿಂದೂಜಾ ಮತ್ತು ಕುಟುಂಬವು 2019ರಲ್ಲಿ ನಂ .1ರಿಂದ 2020ರಲ್ಲಿ ನಂ.2ಗೆ ಇಳಿದಿದೆ. ಈ ವರ್ಷ ನಂ.3 ಸ್ಥಾನಕ್ಕೆ ಕುಸಿದಿದೆ. ಈ ಕುಟುಂಬದ ನಿವ್ವಳವು 1 ಬಿಲಿಯನ್ ಪೌಂಡ್​​ ಹೆಚ್ಚಳವಾಗಿ 17 ಬಿಲಿಯನ್ ಪೌಂಡ್​ಗೆ ತಲುಪಿದೆ.

ನ್ಯೂಕ್ಯಾಸಲ್ ಯುನೈಟೆಡ್ ಮಾಲೀಕರಾದ ಡೇವಿಡ್ ಮತ್ತು ಸೈಮನ್ ರೂಬೆನ್ ಅವರ ಭವಿಷ್ಯವು ಕಳೆದ ವರ್ಷದಲ್ಲಿ 5 ಬಿಲಿಯನ್ ಡಾಲರ್​ಗಳಷ್ಟು ಏರಿಕೆಯಾಗಿದೆ ಎಂದು ಕ್ರಾನಿಕಲ್ ಲೈವ್ ಯುಕೆ ವರದಿ ಮಾಡಿದೆ.

ABOUT THE AUTHOR

...view details