ಮುಂಬೈ: ಕೋವಿಡ್ ಸೋಂಕು ಪೂರ್ವದಲ್ಲಿ ಚಟುವಟಿಕೆಗಳು ನಿಧಾನಕ್ಕೆ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಬ್ರಿಟನ್ನಲ್ಲಿನ ರೂಪಾಂತರ ವೈರಸ್ ಮತ್ತೊಂದು ಸುತ್ತಿನ ಅವಾಂತರ ತಂದಿದೆ. ವಿಮಾನಯಾನದ ಪ್ರಯಾಣಿಕ ನಿರ್ಬಂಧಗಳ ಮತಷ್ಟು ಬಿಗಿಯಾಗಿದ್ದು, ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ವೇಗವಾಗಿ ಹಬ್ಬುವ ರೂಪಾಂತರ ವೈರಸ್ನ ನಿಯಂತ್ರಣಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಸಿಎಸ್‌ಎಂಐಎ) 24X7 ಕೋವಿಡ್ ಪರೀಕ್ಷಾ ಸೌಲಭ್ಯ ತಲೆ ಎತ್ತಿದೆ. ಈ ಪರೀಕ್ಷಾ ಘಟಕದಲ್ಲಿ 4,500 ರೂ. ವೆಚ್ಚದಲ್ಲಿ 13 ನಿಮಿಷಗಳಲ್ಲಿ ಪರೀಕ್ಷಾ ಫಲಿತಾಂಶ ನೀಡುತ್ತದೆ.
ಡಿಸೆಂಬರ್ 15ರಂದು ಆರಂಭವಾದ ಈ ಟೆಸ್ಟ್, ಸಿಎಸ್ಎಂಐಎ ದಿನಕ್ಕೆ ಸರಾಸರಿ 30-35 ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ನೀಡಿದೆ. ಡಿಸೆಂಬರ್ 28ರವರೆಗೆ ವಿಮಾನ ನಿಲ್ದಾಣದಲ್ಲಿ ಒಟ್ಟು 400 ಎಕ್ಸ್‌ಪ್ರೆಸ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಮಹಾರಾಷ್ಟ್ರ ಹೊರಗಿನ ಪ್ರದೇಶಗಳ ಪ್ರಯಾಣಿಕರು ಸೇರಿದ್ದಾರೆ ಎಂದು ತಿಳಿಸಿದೆ.