ಕರ್ನಾಟಕ

karnataka

ETV Bharat / business

ಬ್ಯಾಂಕ್​ಗಳು ನಿಮಗೆ ಸಾಲ ಕೊಡದಿದ್ದರೆ ನಮಗೆ ದೂರುಕೊಡಿ: ನಿರ್ಮಲಾ ಸೀತಾರಾಮನ್​ - ಎಂಎಸ್​ಎಂಇಗಳಿಗೆ ಸಾಲ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2020-21ರಲ್ಲಿ ಮಂಡಿಸಿದ ಪ್ರಸ್ತಾವನೆಗಳನ್ನು ಇಲ್ಲಿನ ವ್ಯಾಪಾರಿ ಮತ್ತು ಉದ್ಯಮಗಳಿಗೆ ವಿವರಿಸಿದ್ದಾರೆ. ಕಾರಣವಿಲ್ಲದೆ ಬ್ಯಾಂಕ್​ಗಳು ಸಾಲವನ್ನು ನೀಡಲು ನಿರಾಕರಿಸುತ್ತಿದ್ದರೆ ಎಂಎಸ್‌ಎಂಇಗಳು ಕೇಂದ್ರಕ್ಕೆ ದೂರು ಕಳುಹಿಸಬಹುದು. ಇದಕ್ಕಾಗಿ ವಿಶೇಷ ಸೆಂಟರ್​ ಅನ್ನು ಶೀಘ್ರವೇ ಘೋಷಿಸಲಾಗುವುದು ಎಂದು ಹೇಳಿದ್ದಾರೆ.

Bank Loan
ಬ್ಯಾಂಕ್ ಸಾಲ

By

Published : Feb 8, 2020, 6:00 PM IST

ಚೆನ್ನೈ:ಯಾವುದೇ ಕಾರಣವಿಲ್ಲದೆ ಬ್ಯಾಂಕ್​ಗಳು ಸಾಲ ನೀಡಲು ನಿರಾಕರಿಸಿದರೆ ದೂರು ನೀಡುವಂತೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ತಿಳಿಸಿದ್ದಾರೆ.

ಇತ್ತೀಚೆಗೆ ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2020-21ರಲ್ಲಿ ಮಂಡಿಸಿದ ಪ್ರಸ್ತಾವನೆಗಳನ್ನು ಇಲ್ಲಿನ ವ್ಯಾಪಾರಿ ಮತ್ತು ಉದ್ಯಮಗಳಿಗೆ ವಿವರಿಸಿದ್ದಾರೆ. ಕಾರಣವಿಲ್ಲದೆ ಬ್ಯಾಂಕ್​ಗಳು ಸಾಲವನ್ನು ನೀಡಲು ನಿರಾಕರಿಸುತ್ತಿದ್ದರೆ ಎಂಎಸ್‌ಎಂಇಗಳು ಕೇಂದ್ರಕ್ಕೆ ದೂರು ಕಳುಹಿಸಬಹುದು. ಇದಕ್ಕಾಗಿ ವಿಶೇಷ ಸೆಂಟರ್​ ಅನ್ನು ಶೀಘ್ರವೇ ಘೋಷಿಸಲಾಗುವುದು ಎಂದು ಹೇಳಿದ್ದಾರೆ.

ದೂರಿನ ಪ್ರತಿಯನ್ನು ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರಿಗೂ ಸಹ ಕಳುಹಿಸಬೇಕು. ಮೂಲಭೂತವಾದವುಗಳು ಉತ್ತಮವಾಗಿ ಇರುವುದರಿಂದ ವಿದೇಶಿ ವಿನಿಮಯ ಸಂಗ್ರಹವೂ ಉತ್ತಮವಾಗಿದೆ. ಬಜೆಟ್​​ನಲ್ಲಿನ ಘೋಷಣೆಗಳು ಸಮಾಜದ ಎಲ್ಲಾ ವರ್ಗದವರಿಗೆ ತಲುಪಿಸಲು ಅಧಿಕಾರಿಗಳು ಶ್ರಮಿಸಿದ್ದಾರೆ ಎಂದರು.

ಒಟ್ಟಾರೆ ಆರ್ಥಿಕ ಮೂಲಭೂತ ಅಂಶಗಳು ಉತ್ತಮವಾಗಿವೆ. ನಮ್ಮ ಗಮನ ಆಸ್ತಿಗಳನ್ನು ಸೃಷ್ಟಿಸುವುದು ಹಾಗೂ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವುದಾಗಿದೆ ಎಂದು ಸೀತಾರಾಮನ್ ತಿಳಿಸಿದರು.

ABOUT THE AUTHOR

...view details