ನವದೆಹಲಿ:ನೆರೆಹೊರೆಯ ಮತ್ತು ಸ್ವತಂತ್ರ ಅಂಗಡಿಗಳು ತೆರೆಯಲು ಅನುಮತಿ ನೀಡಿರುವ ಕೇಂದ್ರ ಸರ್ಕಾರ ಆದೇಶದ ಸುಲಭ ಅನುಷ್ಠಾನಕ್ಕೆ ಹೆಚ್ಚಿನ ಸ್ಪಷ್ಟತೆಯ ಅಗತ್ಯವಿದೆ ಎಂದು ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ (ಆರ್‌ಎಐ) ಹೇಳಿದೆ.
'ಮಾರುಕಟ್ಟೆ ಸಂಕೀರ್ಣಗಳು' ಎಂಬಂತ ಪದಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲಾಗದ ಕಾರಣ ಸ್ಪಷ್ಟತೆಯ ಅಗತ್ಯವಿದೆ ಎಂದಿದೆ. ಸಾಮಾಜಿಕ ಅಂತರದ ಮಾನದಂಡಗಳೊಂದಿಗೆ ಸುರಕ್ಷಿತ ಎಂದು ಭಾವಿಸುವ ದಿನಾಂಕದಂದು ಚಿಲ್ಲರೆ ಉದ್ಯಮದ ಪ್ರಾರಂಭಕ್ಕೆ ಸ್ಪಷ್ಟ ವ್ಯಾಖ್ಯಾನದೊಂದಿಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ ಎಂದಿದೆ.