ನವದೆಹಲಿ:18 ಭಾರತೀಯ ಕಾರ್ಪೊರೇಟ್ಸ್ ಮತ್ತು ಬ್ಯಾಂಕುಗಳುಮೂಡೀಸ್ ಹೂಡಿಕೆದಾರರ ಸೇವೆಯ ರೇಟಿಂಗ್ಸ್ ಅನ್ನು ಹೆಚ್ಚಿಸಿಕೊಂಡಿವೆ. ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ಎಸ್‌ಬಿಐ ಮತ್ತು ಆಕ್ಸಿಸ್ ಬ್ಯಾಂಕ್ ಸೇರಿದಂತೆ ಇತರ ಸಂಸ್ಥೆಗಳು ನಕಾರಾತ್ಮಕದಿಂದ ಸ್ಥಿರತೆಗೆ ಅಪ್‌ಗ್ರೇಡ್ ಮಾಡಿಕೊಂಡಿವೆ. ಯುಎಸ್ ಮೂಲದ ರೇಟಿಂಗ್ ಏಜೆನ್ಸಿ 'Baa3'ನಲ್ಲಿ ರೇಟಿಂಗ್ಸ್ ಅನ್ನು ದೃಢಪಡಿಸಲಾಗಿದೆ.
ಆರ್‌ಐಎಲ್, ಟಿಸಿಎಸ್, ಇನ್ಫೋಸಿಸ್, ಒಎನ್‌ಜಿಸಿ, ಪೆಟ್ರೋನೆಟ್ ಎಲ್‌ಎನ್‌ಜಿ ಲಿಮಿಟೆಡ್, ಅಲ್ಟ್ರಾಟೆಕ್ ಸಿಮೆಂಟ್, ಆಯಿಲ್ ಇಂಡಿಯಾ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಕಂಪನಿಗಳ ರೇಟಿಂಗ್ ಅನ್ನು ಪರಿಷ್ಕರಿಸಲಾಗಿದೆ. ಏಜೆನ್ಸಿ ಖಾಸಗೀಕರಣಕ್ಕೆ ಒಳಪಟ್ಟಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್) ರೇಟಿಂಗ್ ಅನ್ನು ದೃಢಪಡಿಸಲಾಗಿದೆ. ಆದರೆ, ಇದು ನಕಾರಾತ್ಮಕ ದೃಷ್ಟಿಕೋನವನ್ನು ಕಾಯ್ದುಕೊಂಡಿದೆ.