ಕರ್ನಾಟಕ

karnataka

ETV Bharat / business

ಭಾರತದ ಈ ವರ್ಷದ ಆರ್ಥಿಕತೆ ಶೇ.9.6ಕ್ಕೆ ನಿಗದಿ ಮಾಡಿದ Moody's.. ಈ ಮೊದಲೆಷ್ಟಿತ್ತು? - ಭಾರತದ ಈ ವರ್ಷದ ಆರ್ಥಿಕತೆ ಶೇ.9.6ರಷ್ಟು

ಕೊರೊನಾ ಲಾಕ್​ಡೌನ್​ ಹಾಗೂ ವ್ಯಾಕ್ಸಿನೇಷನ್​ ಡ್ರೈವ್​ನಿಂದಾಗಿ ಭಾರತದ ಈ ವರ್ಷದ ಆರ್ಥಿಕತೆ ಶೇ.9.6ರಷ್ಟು ಇರಲಿದೆ ಎಂದು ಮೂಡೀಸ್​ ವರದಿ ನೀಡಿದೆ.

Moody
Moody

By

Published : Jun 23, 2021, 10:48 PM IST

ನವದೆಹಲಿ:ಭಾರತದ ಅರ್ಥವ್ಯವಸ್ಥೆ 2021ರಲ್ಲಿ ಶೇ 13.9ರಿಂದ 9.6ಕ್ಕೆ ಕುಸಿತಗೊಳ್ಳಲಿದೆ ಎಂದು ಜಾಗತಿಕ ರೇಟಿಂಗ್​ ಸಂಸ್ಥೆ ಮೂಡಿಸ್​​ ತಿಳಿಸಿದೆ. ಕೊರೊನಾ ಹಾಗೂ ಲಾಕ್​ಡೌನ್​ ಕಾರಣದಿಂದಾಗಿ ಈ ಕುಸಿತ ಕಂಡು ಬರಲಿದೆ ಎಂದು ಮೂಡೀಸ್ ಹೇಳಿಕೊಂಡಿದೆ. ಈ ಹಿಂದೆ ಮಾರ್ಚ್​ ತಿಂಗಳಲ್ಲಿ ವರದಿ ನೀಡಿದ್ದ ಮೂಡೀಸ್​​ ದೇಶದ ಆರ್ಥಿಕತೆ ಶೇ. 13.9ರಷ್ಟಾಗಲಿದೆ ಎಂದು ಹೇಳಿತ್ತು.

2021ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೆ.9.9ಕ್ಕೆ ಇಳಿಕೆಯಾಗಿಲಿದ್ದು, ಈ ಹಿಂದಿನ ಅಂದಾಜು ಜಿಡಿಪಿ ಶೇ. 13.9ರ ಬದಲಾಗಿ ಈ ನಷ್ಟ ಅನುಭವಿಸಲಿದೆ ಎಂದು ತಿಳಿಸಿದೆ. ಜೂನ್ ತ್ರೈಮಾಸಿಕಕ್ಕೆ ಕೋವಿಡ್​ ವ್ಯಾಕ್ಸಿನೇಷನ್​​ ಆರ್ಥಿಕ ನಷ್ಟಕ್ಕೆ ಮುಖ್ಯ ಕಾರಣವಾಗಿದ್ದು, ಎರಡನೇ ಅವಧಿಯಲ್ಲಿ ಕೋವಿಡ್​ ಸೋಂಕಿನಿಂದ ಈ ಇಳಿಕೆ ದಾಖಲಾಗಿದೆ ಎಂದಿದೆ.

ದೇಶದ ಕೆಲವೊಂದು ರಾಜ್ಯಗಳು ಇದೀಗ ನಿರ್ಬಂಧ ಸಡಿಲಿಕೆ ಮಾಡುತ್ತಿರುವ ಕಾರಣ ಅರ್ಥಿಕ ಚಟುವಟಿಕೆಗಳು ಪುನಾರಂಭಗೊಳ್ಳಲಿದ್ದು, ಆರ್ಥಿಕ ಅಭಿವೃದ್ಧಿ ಸಾಧ್ಯತೆ ಇದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಆದರೆ, 2021ರ ಭಾರತದ ಆರ್ಥಿಕ ಬೆಳವಣಿಗೆ ಅನಿಶ್ಚಿತತೆ ಎಂದು ಹೇಳಿದೆ.

ಇದನ್ನೂ ಓದಿರಿ: ಅಬ್ಬಬ್ಬಾ.. ಭಾರತದ ಆರ್ಥಿಕತೆಯನ್ನೂ ಮೀರಿಸಿದ Microsoft: 2 ಟ್ರಿಲಿಯನ್​ ಮಾರುಕಟ್ಟೆ ಮೌಲ್ಯ ತಲುಪಿದ Company

ಕೋವಿಡ್​ ಎರಡನೇ ಅಲೆ ಕಳೆದ ವರ್ಷದಷ್ಟು ತೀವ್ರವಾಗಿಲ್ಲ ಎಂದಿರುವ ಮೂಡಿಸ್​, ಮುಂದಿನ ಅಪಾಯ ತಳ್ಳಿ ಹಾಕುವಂತಿಲ್ಲ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಆರ್ಥಿಕ ಬೆಳವಣಿಗೆ ಕ್ರಮೇಣ ಚೇತರಿಕೆ ಕಾಣುವ ನಿರೀಕ್ಷೆಯಲ್ಲಿದ್ದು, ಮಾರ್ಚ್​ 2022ರ ವೇಳೆಗೆ ಈ ಹಣಕಾಸು ವರ್ಷ ಕೊನೆಗೊಳ್ಳಲಿದೆ ಎಂದಿದೆ. ಮಾರ್ಚ್​​ 2022ಕ್ಕೆ ಹಣಕಾಸು ವರ್ಷ ಕೊನೆಗೊಳ್ಳಲಿದ್ದು, ಈ ವೇಳೆಗೆ ಭಾರತ ಶೇ. 9.3ರಷ್ಟು ಬೆಳವಣಿಗೆ ಕಾಣಲಿದೆ ಎಂದಿದೆ. ಈ ಹಿಂದೆ ಕೋವಿಡ್​ನಿಂದಾಗಿ ಭಾರತದ ಆರ್ಥಿಕತೆ ಶೇ. 7.3ರಷ್ಟು ಕುಗ್ಗಿತ್ತು. ಇದಕ್ಕೆ ಮುಖ್ಯ ಕಾರಣವಾಗಿದ್ದು, ಕೋವಿಡ್​ನ ಮೊದಲ ಅಲೆ ಎಂಬ ಮಾಹಿತಿ ನೀಡಿದೆ.

ABOUT THE AUTHOR

...view details