ಕರ್ನಾಟಕ

karnataka

ETV Bharat / business

ಕೋವಿಡ್​ ತೆರಿಗೆ ಕುರಿತು ಮಾಧ್ಯಮಗಳಿಗೆ ತಪ್ಪು ಮಾಹಿತಿ: ಮೂವರು ಐಟಿ ಅಧಿಕಾರಿಗಳು ವಜಾ - ರಾಜಕೀಯ ಪಿತೂರಿಯ ಆರೋಪ

ಹೊಸ ತೆರಿಗೆ ಹೇರಲು ಶಿಫಾರಸು ಮಾಡಿ, ಈ ವಿಷಯವನ್ನು ಮಾಧ್ಯಮಗಳಿಗೂ ಸೋರಿಕೆ ಮಾಡಿದ ಆರೋಪದಡಿ ಮೂವರು ಹಿರಿಯ ಭಾರತೀಯ ಕಂದಾಯ ಸೇವಾ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ.

tax
tax

By

Published : Apr 28, 2020, 10:21 AM IST

ನವದೆಹಲಿ:ಕೋವಿಡ್​ ತೆರೆಗೆ ಕುರಿತು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ ಆರೋಪದ ಮೂವರು ಹಿರಿಯ ಭಾರತೀಯ ಕಂದಾಯ ಸೇವಾ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಈ ಅಧಿಕಾರಿಗಳು ಯಾವುದೇ ಅಧಿಕಾರವಿಲ್ಲದೆ ಹೊಸ ತೆರಿಗೆಗಳನ್ನು ಹೇರಲು ಶಿಫಾರಸು ಮಾಡಿದ್ದು, ಈ ವಿಷಯವನ್ನು ಮಾಧ್ಯಮಗಳಿಗೂ ಸೋರಿಕೆ ಮಾಡಿ, ಈಗಾಗಲೇ ಒತ್ತಡಕ್ಕೊಳಗಾದ ಆರ್ಥಿಕ ಪರಿಸ್ಥಿತಿಯಲ್ಲಿ ಜನರಲ್ಲಿ ಭೀತಿ ಉಂಟುಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

"ತೆರಿಗೆ ಹೆಚ್ಚಳ, ಸಂಪತ್ತು ತೆರಿಗೆ ವಿಧಿಸುವುದು, ಪಿತ್ರಾರ್ಜಿತ ತೆರಿಗೆ, ಕೋವಿಡ್-19 ಹೆಚ್ಚುವರಿ ಶುಲ್ಕ ವಿಧಿಸುವುದುರ ಕುರಿತು ಅಧಿಕಾರಿಗಳು ಮಾಧ್ಯಮಗಳಿಗೆ ತಪ್ಪು ಮಾಹಿತಿ ಸೋರಿಕೆ ಮಾಡಿ ಭೀತಿ ಸೃಷ್ಟಿಸಿದ್ದಾರೆ" ಎಂದು ಸಿಬಿಡಿಟಿ ಹೇಳಿಕೆಯಲ್ಲಿ ತಿಳಿಸಿದೆ.

ಈ ಘಟನೆಯ ಹಿಂದೆ ರಾಜಕೀಯ ಪಿತೂರಿಯ ಆರೋಪವೂ ಕೇಳಿಬಂದಿದೆ. ಅಧಿಕಾರಿಗಳಾದ ಪ್ರಶಾಂತ್ ಭೂಷಣ್, ಪ್ರಕಾಶ್ ದುಬೆ ಮತ್ತು ಸಂಜಯ್ ಬಹದ್ದೂರ್ ವಿರುದ್ಧ ಆರೋಪವಿದ್ದು, ಚಾರ್ಜ್​ಶೀಟ್ ವಿಧಿಸಲಾಗಿದೆ.

ABOUT THE AUTHOR

...view details