ಕರ್ನಾಟಕ

karnataka

ETV Bharat / business

ಏ.20 ರಿಂದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಲ್ಲಿ ಮೊಬೈಲ್​, ಟೆಲಿವಿಷನ್, ರೆಫ್ರಿಜರೇಟರ್ ಲಭ್ಯ

ಲಾಕ್​ಡೌನ್​ ಸಮಯದಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ​ ಮೂಲಕ ಮೊಬೈಲ್ ಫೋನ್, ಟೆಲಿವಿಷನ್, ರೆಫ್ರಿಜರೇಟರ್ ಸೇರಿದಂತೆ ಸ್ಟೇಷನರಿ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

refrigerators to be available on e-commerce platforms
20 ರಿಂದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಲ್ಲಿ ಮೊಬೈಲ್​

By

Published : Apr 16, 2020, 5:21 PM IST

ನವದೆಹಲಿ: ಏಪ್ರಿಲ್ 20 ರಿಂದ ಮೊಬೈಲ್ ಫೋನ್, ಟೆಲಿವಿಷನ್, ರೆಫ್ರಿಜರೇಟರ್, ಲ್ಯಾಪ್‌ಟಾಪ್ ಮತ್ತು ಸ್ಟೇಷನರಿ ವಸ್ತುಗಳನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಅಮೇಜಾನ್, ಫ್ಲಿಪ್ ಕಾರ್ಟ್,​ ಸ್ನ್ಯಾಪ್​ಡೀಲ್​ ಮೂಲಕ ಮಾರಾಟ ಮಾಡಲು ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇ-ಕಾಮರ್ಸ್ ಕಂಪನಿಗಳ ವಿತರಣಾ ವ್ಯಾನ್‌ಗಳಿಗೆ ರಸ್ತೆಗಳಲ್ಲಿ ಸಂಚರಿಸಲು ಅಧಿಕಾರಿಗಳ ಅನುಮತಿ ಬೇಕಾಗುತ್ತದೆ. ಬುಧವಾರದ ಮಾರ್ಗಸೂಚಿಗಳ ಪ್ರಕಾರ, ವಿಸ್ತೃತ ಲಾಕ್‌ಡೌನ್ ಸಮಯದಲ್ಲಿ ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳನ್ನು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.

ಇ-ಕಾಮರ್ಸ್ ಆಪರೇಟರ್‌ಗಳು ಬಳಸುವ ವಾಹನಗಳನ್ನು ಅಗತ್ಯ ಅನುಮತಿಗಳೊಂದಿಗೆ ಓಡಿಸಲು ಅನುಮತಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಗೃಹ ಸಚಿವಾಲಯದ ಹಿಂದಿನ ಅಧಿಸೂಚನೆಯಂತೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆಹಾರ, ಔಷಧಿ ಮತ್ತು ವೈದ್ಯಕೀಯ ಸಾಧನಗಳಂತಹ ಅಗತ್ಯ ವಸ್ತುಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿ ನೀಡಲಾಗಿತ್ತು.

ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಲಾಜಿಸ್ಟಿಕ್ಸ್ ಮತ್ತು ವಿತರಣಾ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ತೊಡಗಿಸಿಕೊಂಡಿದ್ದಾರೆ. ಈ ಕ್ಷೇತ್ರವನ್ನು ತೆರೆಯುವ ಮೂಲಕ, ಈ ದೊಡ್ಡ ವಿಭಾಗದ ನೌಕರರ ಹಿತಾಸಕ್ತಿಗಳನ್ನು ರಕ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ.

For All Latest Updates

ABOUT THE AUTHOR

...view details