ಕರ್ನಾಟಕ

karnataka

ETV Bharat / business

ಸೌಮ್ಯ, ಭಾಗಶಃ ದಿವ್ಯಾಂಗರಿಗೆ ಇನ್ಮುಂದೆ ಸಿಗಲಿದೆ ವಾಹನ ಚಾಲನೆ ಪರವಾನಿಗೆ!! - ಸೌಮ್ಯ ಬಣ್ಣದ ಕುರುಡು

ಮೋಟಾರು ವಾಹನಗಳ ನಿಯಮಗಳ 1989ರ ಫಾರ್ಮ್​ ಮತ್ತು ಫಾರ್ಮ್​ 1ಎಗೆ ತಿದ್ದುಪಡಿ ತರಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದೆ..

driving licence
ಚಾಲನೆ ಪರವಾನಿಗೆ

By

Published : Jun 26, 2020, 9:59 PM IST

ನವದೆಹಲಿ :ಸೌಮ್ಯ ಅಥವಾ ಭಾಗಶಃ ದಿವ್ಯಾಂಗರು ಸಹ ಇನ್ಮುಂದೆ ಚಾಲನಾ ಪರವಾನಗಿ ಪಡೆಯಬಹುದು ಎಂದು ಕೇಂದ್ರ ಸರ್ಕಾರದ ಅಧಿಸೂಚನೆ ಹೊರಡಿಸಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕೇಂದ್ರ ಮೋಟಾರು ವಾಹನಗಳ (ಸಿಎಮ್‌ವಿ) ನಿಯಮಗಳು 1989ರ ಫಾರ್ಮ್ 1 ಮತ್ತು ಫಾರ್ಮ್ 1ಎಗೆ ತಿದ್ದುಪಡಿ ಮಾಡಲು ಅಧಿಸೂಚನೆ ಹೊರಡಿಸಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

'ದಿವ್ಯಾಂಗ' ನಾಗರಿಕರಿಗೆ ಸಾರಿಗೆ ಸಂಬಂಧಿತ ಸೇವೆಗಳನ್ನು ಪಡೆಯಲು ಮತ್ತು ವಿಶೇಷವಾಗಿ ಚಾಲನಾ ಪರವಾನಗಿ ಪಡೆಯಲು ಸಂಬಂಧಿಸಿದ ಹಲವು ಕ್ರಮಗಳನ್ನು ರಸ್ತೆ ಸಾರಿಗೆ ಸಚಿವಾಲಯ ತೆಗೆದುಕೊಳ್ಳುತ್ತಿದೆ ಎಂದು ಹೇಳಿದೆ.

ದೈಹಿಕ ಸಾಮರ್ಥ್ಯ (ಫಾರ್ಮ್​ 1) ಅಥವಾ ವೈದ್ಯಕೀಯ ಪ್ರಮಾಣಪತ್ರ (ಫಾರ್ಮ್​ 1ಎ) ಕುರಿತು ಘೋಷಣೆಯಲ್ಲಿನ ಅವಶ್ಯಕತೆಗಳಿಂದ ಬಣ್ಣ-ಕುರುಡು (ಭಾಗಶಃ ದಿವ್ಯಾಂಗರು) ನಾಗರಿಕರಿಗೆ ಚಾಲನಾ ಪರವಾನಗಿ ಪಡೆಯುವಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂಬ ದೂರುಗಳು ಬಂದಿದ್ದರಿಂದ ವೈದ್ಯಕೀಯ ತಜ್ಞರ ಸಲಹೆ ಪಡೆಡು ಈ ತಿದ್ದಪಡಿ ತರಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ವೈದ್ಯಕೀಯ ತಜ್ಞರ ನೀಡಿದ ಶಿಫಾರಸುಗಳಲ್ಲಿ ಸೌಮ್ಯದಿಂದ ಮಧ್ಯಮ ಬಣ್ಣ-ಕುರುಡು ಹೊಂದಿರುವ ನಾಗರಿಕರಿಗೆ ವಾಹನ ಚಲಾಯಿಸಲು ಅವಕಾಶ ನೀಡುವುದು ಮತ್ತು ತೀವ್ರ ಬಣ್ಣ- ಕುರುಡು ಹೊಂದಿರುವ ನಾಗರಿಕರಿಗೆ ವಾಹನ ಚಲಾಯಿಸುವುದನ್ನು ನಿರ್ಬಂಧಿಸುವಂತೆ ಸಲಹೆಗಳಿವೆ.

ABOUT THE AUTHOR

...view details