ಭಾರತೀಯರು ಸಾಂಕ್ರಾಮಿಕ ರೋಗ ಕೋವಿಡ್-19 ಬಗೆಗಿನ ಬೆಳವಣಿಗೆಗಳನ್ನು ತಿಳಿಯಲು ಇನ್ನು ಸುಲಭವಾಗಲಿದೆ. ಯಾಕೆಂದ್ರೆ, ಮೈಕ್ರೋಸಾಫ್ಟ್ ಬಿಂಗ್‌ನ ಕೋವಿಡ್ ಟ್ರ್ಯಾಕರ್ ಹೊಸ ಲಕ್ಷಣಗಳೊಂದಿಗೆ ಬರ್ತಿದೆ. ಈ ಟ್ರ್ಯಾಕರ್ ಹಿಂದಿ, ಬೆಂಗಾಲಿ, ಪಂಜಾಬಿ, ತಮಿಳು, ಗುಜರಾತ್, ಮರಾಠಿ, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲೂ ಭರಪೂರ ಮಾಹಿತಿ ಒದಗಿಸಲಿದೆ.
ಬಿಂಗ್ ನ ಹೊಸ ಲಕ್ಷಣಗಳು ಅಪೊಲೊ ಆಸ್ಪತ್ರೆಯ ಸಂಯೋಜಿತವಾಗಿ 4 ಭಾಷೆಗಳಲ್ಲಿ ಮೂಡಿ ಬರ್ತಿರುವ ಸ್ವಯಂ ಆರೋಗ್ಯ ವಿಶ್ಲೇಷಣೆ ಮತ್ತು ಪ್ರತಿಷ್ಠಿತ ಆರೋಗ್ಯ ಸಂಸ್ಥೆಗಳಿಂದ ದೊರೆಯಬಹುದಾದ ಟಿಲಿ ಮೆಡಿಸಿನ್ ಸಹಾಯ ದೊರೆಯಲಿದೆ. ಜನರಿಗೆ ಅವರದ್ದೇ ಆದ ಸ್ಥಳೀಯ ಭಾಷೆಗಳಲ್ಲಿ ಕೊರೊನಾ ಸಾಂಕ್ರಾಮಿಕ ರೋಗಗಳ ಮಹತ್ವದ ಮಾಹಿತಿಗಳು ದೊರೆಯಲಿದೆ ಎಂದು ಕಂಪನಿ ಟ್ವೀಟ್‌ನಲ್ಲಿ ತಿಳಿಸಿದೆ.