ಕರ್ನಾಟಕ

karnataka

ETV Bharat / business

ನಿಷೇಧಿಸಲ್ಪಟ್ಟ ಚೀನಾ ಆ್ಯಪ್​ಗಳ ಪಟ್ಟಿಯಲ್ಲಿದೆ ಮಿ ಬ್ರೌಸರ್ ಪ್ರೊ, ಮೀಪೈ - ಮೀಪೈ

ಭಾರತದಲ್ಲಿ ಎರಡನೇ ಹಂತದಲ್ಲಿ ಬ್ಯಾನ್​ ಮಾಡಿದ ಚೀನಾ ಅಪ್ಲಿಕೇಶನ್‌ಗಳ ಎಲ್ಲ ಹೆಸರುಗಳನ್ನು ಬಹಿರಂಗಪಡಿಸಿರಲಿಲ್ಲ. ಹೊಸ ಪಟ್ಟಿಯಲ್ಲಿರುವ ಹೆಚ್ಚಿನ ಅಪ್ಲಿಕೇಶನ್‌ಗಳು ಹಿಂದೆ ನಿಷೇಧಿಸಲಾದ ಅಪ್ಲಿಕೇಶನ್‌ಗಳ ತದ್ರೂಪುಗಳಾಗಿವೆ ಎಂದು ಹೇಳಲಾಗಿತ್ತು. ಈಗ ಇದೇ ಅಪ್ಲಿಕೇಶನ್​ಗಳ ಪಟ್ಟಿಯಲ್ಲಿ ಮಿ ಬ್ರೌಸರ್ ಪ್ರೊ, ಮೀಪೈ ಕೂಡಾ ಸೇರಿದೆ ಎಂಬ ಮಾಹಿತಿ ಹೊರಬಿದ್ದಿದೆ.

Chinese apps ban
ನಿಷೇಧಿಸಲ್ಪಟ್ಟ ಚೀನಾ ಆ್ಯಪ್​

By

Published : Aug 6, 2020, 2:08 PM IST

ನವದೆಹಲಿ: ಕಳೆದ ಜುಲೈ ತಿಂಗಳ ಅಂತ್ಯದಲ್ಲಿ ಭಾರತ ನಿಷೇಧಿಸಿದ 47 ಚೀನಾ ಮೂಲದ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಸ್ಮಾರ್ಟ್‌ಫೋನ್ ತಯಾರಕ ಕ್ಸಿಯೋಮಿಯ ಮಿ ಬ್ರೌಸರ್ ಪ್ರೊ ಮತ್ತು ಮೀಟು ಟೆಕ್ನಾಲಜಿಯ ಮೀಪೈ ಕೂಡಾ ಸೇರಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಟಿಕ್‌ಟಾಕ್ ಮತ್ತು ಹೆಲೋ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳನ್ನು ಸರ್ಕಾರ ಜೂನ್​ ತಿಂಗಳಲ್ಲಿ ನಿಷೇಧಿಸಿತ್ತು. ನಂತರ, ಕಳೆದ ಜುಲೈನಲ್ಲಿ ಮತ್ತೆ 47 ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು.

ನಿಷೇಧಿಸಲ್ಪಟ್ಟ ಚೀನಾ ಆ್ಯಪ್​ಗಳು

ಮೊದಲು ಬ್ಯಾನ್​ ಮಾಡಿದ 59 ಆ್ಯಪ್​ಗಳ ಹೆಸರನ್ನು ಸರ್ಕಾರ ಬಹಿರಂಗಗೊಳಿಸಿತ್ತು. ಆದರೆ, ಎರಡನೇ ಪಟ್ಟಿಯಲ್ಲಿರುವ ಚೀನಾ ಅಪ್ಲಿಕೇಶನ್‌ಗಳ ಎಲ್ಲಾ ಹೆಸರುಗಳನ್ನು ಬಹಿರಂಗಪಡಿಸಿರಲಿಲ್ಲ. ಹೊಸ ಪಟ್ಟಿಯಲ್ಲಿರುವ ಹೆಚ್ಚಿನ ಅಪ್ಲಿಕೇಶನ್‌ಗಳು ಹಿಂದೆ ನಿಷೇಧಿಸಲಾದ ಅಪ್ಲಿಕೇಶನ್‌ಗಳ ತದ್ರೂಪುಗಳಾಗಿವೆ ಎಂದು ಹೇಳಲಾಗಿತ್ತು. ಈಗ ಇದೇ ಅಪ್ಲಿಕೇಶನ್​ಗಳ ಪಟ್ಟಿಯಲ್ಲಿ ಮಿ ಬ್ರೌಸರ್ ಪ್ರೊ, ಮೀಪೈ ಕೂಡಾ ಸೇರಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

ABOUT THE AUTHOR

...view details