ಕರ್ನಾಟಕ

karnataka

ETV Bharat / business

ಕಂಪನಿಗಳ ಕೋವಿಡ್ ಸಂಬಂಧಿತ ಹಲವು ವ್ಯವಹಾರಗಳ ಸಡಿಲಿಕೆ ಡಿ.31ರ ತನಕ ವಿಸ್ತರಣೆ - ಕೋವಿಡ್ ಸಂಬಂಧಿತ ಕಂಪನಿಗಳ ವ್ಯವಹಾರಿ ಸಡಿಲಿಕೆ

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ದೇಶದ ಕೆಲವು ಭಾಗಗಳಲ್ಲಿ ಕೋವಿಡ್​-19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಅಡೆತಡೆಗಳನ್ನು ಗಮನದಲ್ಲಿ ಇಟ್ಟುಕೊಂಡು ಹಲವು ಯೋಜನೆಗಳ ಅವಧಿಯನ್ನು 2020ರ ಡಿಸೆಂಬರ್​ 31ರವರೆಗೆ ವಿಸ್ತರಿಸಿದೆ..

FM
ಎಫ್​ಎಂ

By

Published : Sep 28, 2020, 10:23 PM IST

ನವದೆಹಲಿ: ಕೋವಿಡ್​-19 ಸಾಂಕ್ರಾಮಿಕ ಮಧ್ಯೆ ಕಂಪನಿಗಳಿಗೆ ವಹಿವಾಟು ಉತ್ತೇಜನೆಯ ಭಾಗವಾಗಿ ಹಲವು ಸಡಲಿಕೆಗಳ ಅವಧಿಯನ್ನು 2020ರ ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಕಾರ್ಪೊರೇಟ್​ ವ್ಯವಹಾರಗಳ ಸಚಿವಾಲಯ (ಎಂಸಿಎ) ತಿಳಿಸಿದೆ.

ಈ ಬಗ್ಗೆ ಪೋಸ್ಟ್ ಮಾಡಿದ ಸಚಿವಾಲಯವು, ಕಂಪನಿಗಳ ಮರು ಪ್ರಾರಂಭ ಯೋಜನೆಯಡಿ 2020ರ ಡಿಸೆಂಬರ್ 30ರವರೆಗೆ, ಸೆಪ್ಟೆಂಬರ್ 30ರಿಂದ ಮಾನ್ಯವಾಗಿರುತ್ತದೆ. ಕಂಪನಿಗಳ ಮಂಡಳಿ ಸಭೆಗಳನ್ನು ವಿಡಿಯೋ ಕಾನ್ಫರೆನ್ಸ್ ಅಥವಾ ಇತರ ಆಡಿಯೋ ದೃಶ್ಯ ಕಾರ್ಯವಿಧಾನದ ಮೂಲಕ ಈ ವರ್ಷದ ಅಂತ್ಯದವರೆಗೆ ನಡೆಸಬಹುದು.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ದೇಶದ ಕೆಲವು ಭಾಗಗಳಲ್ಲಿ ಕೋವಿಡ್​-19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಅಡೆತಡೆಗಳನ್ನು ಗಮನದಲ್ಲಿ ಇಟ್ಟುಕೊಂಡು ಹಲವು ಯೋಜನೆಗಳ ಅವಧಿಯನ್ನು 2020ರ ಡಿಸೆಂಬರ್​ 31ರವರೆಗೆ ವಿಸ್ತರಿಸಿದೆ. ಹೆಚ್ಚಿನ ವ್ಯವಹಾರವನ್ನು ಸುಲಭಗೊಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ಕಚೇರಿ ಟ್ವೀಟ್ ಮಾಡಿದೆ.

ಕಂಪನಿಗಳು ತಮ್ಮ ಹಿಂದಿನ ದಿವಾಳಿತನ ಉತ್ತಮಗೊಳಿಸಲು 2020ರ ಏಪ್ರಿಲ್ 1ರಿಂದ ಸೆಪ್ಟೆಂಬರ್‌ರವರೆಗೆ ಮಾನ್ಯವಾಗಿರುವ ಕಂಪನಿಗಳ ಮರು ಪ್ರಾರಂಭ ಯೋಜನೆ-2020ಯನ್ನ ಸಚಿವಾಲಯ ಪರಿಚಯಿಸಿತ್ತು. ಈ ಯೋಜನೆಯನ್ನು ಈಗ 2020ರ ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ.

ABOUT THE AUTHOR

...view details