ಕರ್ನಾಟಕ

karnataka

ETV Bharat / business

2022ರ ಜನವರಿಯಿಂದ ಮಾರುತಿ ಸುಜುಕಿ ಕಾರುಗಳ ದರದಲ್ಲಿ ಏರಿಕೆ

ಮಾರುತಿ ಸುಜುಕಿ 2021ರಲ್ಲಿ 3 ಸಲ ದರ ಏರಿಕೆ ಮಾಡಿತ್ತು. ಜನವರಿಯಲ್ಲಿ ಶೇಕಡಾ 1.4ರಷ್ಟು, ಏಪ್ರಿಲ್‌ ತಿಂಗಳಲ್ಲಿ ಶೇಕಡಾ 1.6ರಷ್ಟು ಮತ್ತು ಸೆಪ್ಟೆಂಬರ್‌ನಲ್ಲಿ ಶೇಕಡಾ 1.9.ರಷ್ಟು ಏರಿಕೆ ಮಾಡಿತ್ತು. ಮುಂದಿನ ವರ್ಷದ ಆರಂಭದಲ್ಲಿಯೇ ಕಾರುಗಳ ದರ ಏರಿಕೆ ಮಾಡಲಾಗುವುದು ಎಂದು ಘೋಷಿಸಿದೆ.

maruti suzuki
ಮಾರುತಿ ಸುಜುಕಿ ಕಾರುಗಳ ದರದಲ್ಲಿ ಏರಿಕೆ

By

Published : Dec 2, 2021, 7:58 PM IST

Updated : Dec 2, 2021, 8:14 PM IST

ದೇಶದೆಲ್ಲೆಡೆ ಈಗ ದರ ಏರಿಕೆಯದ್ದೇ ಸದ್ದು. ಪೆಟ್ರೋಲ್​, ಡೀಸೆಲ್, ಎಲ್​ಪಿಜಿ ಗ್ಯಾಸ್​ ಅಲ್ಲದೇ ತರಕಾರಿ ದರಗಳೂ ಗಗನಮುಖಿಯಾಗಿವೆ. ದರ ಏರಿಕೆ ಬಿಸಿ ಜನಸಾಮಾನ್ಯರನ್ನು ಸುಡುತ್ತಿರುವ ಬೆನ್ನಲ್ಲೇ ಇದೀಗ ಶ್ರೀಮಂತರಿಗೂ ಬಿಸಿ ತಾಕುವಂತಾಗಿದೆ.

ದೇಶೀಯ ವಾಹನ ದೈತ್ಯ ಮಾರುತಿ ಸುಜುಕಿ ತನ್ನ ಕಾರುಗಳ ಬೆಲೆ ಏರಿಕೆ ಮಾಡಲು ಸಜ್ಜಾಗಿದೆ. ಮುಂದಿನ ವರ್ಷದಿಂದ(2022) ವಾಹನಗಳ ದರವನ್ನು ಹೆಚ್ಚಳ ಮಾಡಲಾಗುವುದು ಎಂದು ಘೋಷಿಸಿದೆ. ಇದಕ್ಕೆ ಉತ್ಪಾದನಾ ವೆಚ್ಚವೇ ಕಾರಣ ಎಂದು ಅದು ತಿಳಿಸಿದೆ. ಆದರೆ, ಯಾವ ಮಾದರಿಯ ಕಾರಿಗೆ ಎಷ್ಟು ದರ ಹೆಚ್ಚಳ ಎಂಬುದನ್ನು ಬಹಿರಂಗಪಡಿಸಿಲ್ಲ.

ಮಾರುತಿ ಸುಜುಕಿ 2021ರಲ್ಲಿ 3 ಸಲ ದರ ಏರಿಕೆ ಮಾಡಿತ್ತು. ಜನವರಿಯಲ್ಲಿ ಶೇಕಡಾ 1.4ರಷ್ಟು, ಏಪ್ರಿಲ್‌ ತಿಂಗಳಲ್ಲಿ ಶೇಕಡಾ 1.6ರಷ್ಟು ಮತ್ತು ಸೆಪ್ಟೆಂಬರ್‌ನಲ್ಲಿ ಶೇಕಡಾ 1.9.ರಷ್ಟು ಏರಿಕೆ ಮಾಡಿತ್ತು. ಇದು ಕಂಪನಿಯ ಆಲ್ಟೊದಿಂದ ಹಿಡಿದು ಎಸ್‌ಯುವಿವರೆಗಿನ ಎಲ್ಲ ಮಾದರಿಯ ಕಾರುಗಳಿಗೆ ಅನ್ವಯಿಸುವಂತೆ ದರ ಏರಿಕೆ ಮಾಡಿತ್ತು.

ಇದನ್ನೂ ಓದಿ: ಕೃಷಿ ಯಂತ್ರೋಪಕರಣಗಳ ಖರೀದಿಗೆ ರೈತರಿಗೆ ಸಾಲ.. ಅದಾನಿ ಗ್ರೂಪ್​ ಜೊತೆ ಎಸ್​ಬಿಐ ಒಡಂಬಡಿಕೆ

ಕಾರುಗಳ ಉತ್ಪಾದನಾ ವೆಚ್ಚ ಹೆಚ್ಚಿನ ಪ್ರಮಾಣದಲ್ಲಿದೆ. ಇದರಿಂದ ಕಂಪನಿಯ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ. ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಕಂಪನಿ ಇಚ್ಚಿಸುವುದಿಲ್ಲ. ಆದರೆ, ವೆಚ್ಚದ ಒಂದು ಭಾಗವನ್ನು ಮಾತ್ರ ಗ್ರಾಹಕರ ಮೇಲೆ ಹೊರಿಸಲೇಬೇಕಾಗಿದೆ. ಮುಂದಿನ ವರ್ಷದ(2022) ಜನವರಿಯಿಂದ ಕಾರುಗಳ ದರ ಏರಿಕೆ ಕಾಣಲಿದೆ ಎಂದು ಮಾರುತಿ ಸುಜುಕಿ ಕಂಪನಿಯ ಭಾರತದ ಹಿರಿಯ ಕಾರ್ಯಕಾರಿ ನಿರ್ದೇಶಕ(ಮಾರ್ಕೆಟಿಂಗ್​ ಅಂಡ್​​ ಸೇಲ್ಸ್​) ಶಶಾಂಕ್ ಶ್ರೀವತ್ಸ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಆಡಿ ಕಾರಿನ ದರವೂ ಹೆಚ್ಚಳ:

ಸುಜುಕಿ ಕಾರುಗಳ ಬೆಲೆ ಏರಿಕೆ ಘೋಷಣೆ ಬೆನ್ನಲ್ಲೇ ಐಷಾರಾಮಿ ಕಾರು ಕಂಪನಿ 'ಆಡಿ' ಕೂಡ ತನ್ನ ಕಾರುಗಳ ಬೆಲೆ ಏರಿಸುವುದಾಗಿ ಘೋಷಿಸಿದೆ. ಕಂಪನಿಯ ಎಲ್ಲ ಮಾದರಿ ಕಾರುಗಳ ಮೇಲೆ ಶೇ.3 ರಷ್ಟು ದರ ಏರಿಕೆ ಮಾಡಲಾಗುವುದು ಎಂದು ಬಹಿರಂಗಪಡಿಸಿದೆ. ಮುಂದಿನ ವರ್ಷ ಜನವರಿ 1 ರಿಂದ ಇದು ಭಾರತದಲ್ಲಿ ಜಾರಿಗೆ ಬರಲಿದೆ ಎಂದು ಘೋಷಿಸಿದೆ. ಉತ್ಪಾದನಾ ವೆಚ್ಚ ಹೆಚ್ಚಳವೇ ಇದಕ್ಕೆ ಕಾರಣ ಎಂದು ಆಡಿ ಕಂಪನಿ ತಿಳಿಸಿದೆ.

ಇದನ್ನೂ ಓದಿ: ನವೆಂಬರ್​ ತಿಂಗಳಲ್ಲಿ ಜಿಎಸ್​ಟಿ ಜಾರಿ ಬಳಿಕ 2ನೇ ಅತ್ಯಧಿಕ ತೆರಿಗೆ ಸಂಗ್ರಹ : ಹಣಕಾಸು ಸಚಿವಾಲಯ ಘೋಷಣೆ

ಪ್ರಸ್ತುತ ದೇಶದಲ್ಲಿ A4, A6, A8L, Q2, Q5, Q8, S5 Sport back, RS5 Sport back, RS7, RSQ8, E-Tron 50, E-Tron 55, E-Tran Sport back 55, E-Tran GT, RS E -ಟ್ರಾನ್ಸ್ ಜಿಟಿ ಮಾದರಿಗಳು ಲಭ್ಯವಿದೆ. ಆಡಿ 2021 ರಲ್ಲಿ 9 ಹೊಸ ಮಾದರಿಯ ಕಾರುಗಳನ್ನು ಅನಾವರಣಗೊಳಿಸಿದೆ. ಇವುಗಳಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳು ಸಹಿತ ಸೇರಿವೆ.

Last Updated : Dec 2, 2021, 8:14 PM IST

ABOUT THE AUTHOR

...view details