ನವದೆಹಲಿ: ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ 2022 ರ ಜನವರಿಯಲ್ಲಿ 1,28,924 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. ಇದೇ ಜನವರಿ 2021ರಲ್ಲಿ 1,39,002 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೇಶೀಯ PV ಮಾರಾಟದಲ್ಲಿ ಶೇಕಡಾ 7.25 ರಷ್ಟು ಕುಸಿತ ದಾಖಲಿಸಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಆದಾಗ್ಯೂ, ಕಂಪನಿಯ ಒಟ್ಟಾರೆ ಮಾರಾಟವು ಈ ವರ್ಷದ ಜನವರಿಯಲ್ಲಿ 1,54,379 ಯುನಿಟ್‌ಗಳಷ್ಟಿತ್ತು. ಇದು 3.96 ಪ್ರತಿಶತದಷ್ಟು ಕುಸಿತವನ್ನು ದಾಖಲಿಸಿದೆ. ಒಟ್ಟು ಮಾರಾಟವು 1,32,461 ಯುನಿಟ್ಗಳಾಗಿವೆ (ಪ್ರಯಾಣಿಕರ ವಾಹನ + ಲಘು ವಾಣಿಜ್ಯ ವಾಹನ) ಇದರಲ್ಲಿ 17,937 ಯುನಿಟ್ ರಫ್ತು ಸಹ ಒಳಗೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು 160,752 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.