ನವದೆಹಲಿ:ಇನ್‌ಪುಟ್ ವೆಚ್ಚ ಹೆಚ್ಚಳದಿಂದಾಗಿ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ದೇಶದ ಅತಿದೊಡ್ಡ ವಾಹನ ತಯಾರಕ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಸೋಮವಾರ ತಿಳಿಸಿದೆ.
ಜುಲೈನಿಂದ ಹೆಚ್ಚಾಗಲಿದೆ ಮಾರುತಿ ಕಾರುಗಳ ಬೆಲೆ - ಮಾರುತಿ ಸುಜುಕಿ ಇಂಡಿಯಾ ಕಾರ್
ವರ್ಷದ ಎರಡನೇ ತ್ರೈಮಾಸಿಕದಲ್ಲಿ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಮಾರುತಿ ಸುಜುಕಿ ಇಂಡಿಯಾ ಹೇಳಿದೆ.
"ಕಳೆದ ವರ್ಷದಿಂದ ವಿವಿಧ ಇನ್‌ಪುಟ್ ವೆಚ್ಚಗಳ ಹೆಚ್ಚಳವು ಕಂಪನಿಯ ವಾಹನಗಳ ವೆಚ್ಚದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಆದ್ದರಿಂದ, ಕಂಪನಿಯು ಮೇಲಿನ ಹೆಚ್ಚುವರಿ ವೆಚ್ಚದ ಕೆಲವು ಪರಿಣಾಮವನ್ನು ಬೆಲೆ ಏರಿಕೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ." ಮಾರುತಿ ಸುಜುಕಿ ಇಂಡಿಯಾ ಹೇಳಿದೆ.
ಉದ್ದೇಶಿತ ಬೆಲೆ ಏರಿಕೆಯ ಪ್ರಮಾಣವನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ) ಬೆಲೆ ಏರಿಕೆಯನ್ನು ಯೋಜಿಸಲಾಗಿದೆ ಮತ್ತು ಹೆಚ್ಚಳವು ವಿಭಿನ್ನ ಮಾದರಿಗಳಿಗೆ ಬದಲಾಗುತ್ತದೆ ಎಂದು ಕಂಪನಿ ತಿಳಿಸಿದೆ.