ನವದೆಹಲಿ: ದೇಶದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ತನ್ನ ವಾಹನ ಚಂದಾದಾರಿಕೆ ಸೇವೆಗಳನ್ನು ನಾಲ್ಕು ನಗರಗಳಿಗೆ ವಿಸ್ತರಿಸಿದೆ. ಮೈಸೂರು, ಮಂಗಳೂರು, ಜೈಪುರ್ ಮತ್ತು ಇಂದೋರ್ ನಗರಗಳಿಗೆ ನೂತನ ಸೇವೆಯನ್ನು ಹೆಚ್ಚಿಸಿರುವುದಾಗಿ ಪ್ರಕಟಿಸಿದೆ.
ಚಂದಾದಾರಿಕೆ ಸೇವೆ ನೀಡಲು ಒರಿಕ್ಸ್ ಆಟೋ ಇನ್ಫ್ರಾಸ್ಟ್ರಕ್ಚರ್ ಸರ್ವೀಸಸ್ ಲಿಮಿಟೆಡ್ (ಒರಿಕ್ಸ್), ಎಎಲ್ಡಿ ಆಟೋಮೋಟಿವ್ ಇಂಡಿಯಾ (ಎಎಲ್ಡಿ ಆಟೋಮೋಟಿವ್) ಮತ್ತು ಮೈಲೆಸ್ ಆಟೋಮೋಟಿವ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (ಮೈಲ್ಸ್) ನೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದಾಗಿ ಹೇಳಿದೆ.
ಕಾರು ಚಂದಾದಾರಿಕೆ ಭಾರತೀಯ ಮಾರುಕಟ್ಟೆಗೆ ಹೊಸ ಮತ್ತು ಮುಂಬರುವ ಪರಿಕಲ್ಪನೆಯಾಗಿದೆ. ಗ್ರಾಹಕರ ಕಲಿಕೆ ಮತ್ತು ಪ್ರತಿಕ್ರಿಯೆಯೊಂದಿಗೆ ನಾವು ನಿಯಮಿತವಾಗಿ ನಮ್ಮ ಚಂದಾದಾರಿಕೆ ಕಾರ್ಯಕ್ರಮವನ್ನು ನವೀಕರಿಸುತ್ತಿದ್ದೇವೆ. ನಮ್ಮ ನೆಟ್‌ವರ್ಕ್‌ನಲ್ಲಿ ನಾಲ್ಕು ಹೊಸ ನಗರಗಳನ್ನು ಸೇರಿಸುವುದರೊಂದಿಗೆ, ಹೆಚ್ಚಿನ ಗ್ರಾಹಕರಿಗೆ ಸೇವೆ ಸಲ್ಲಿಸಲು ನಾವು ಎದುರು ನೋಡುತ್ತಿದ್ದೇವೆ ಎಂಎಸ್‌ಐ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ ಮತ್ತು ಸೇಲ್ಸ್) ಶಶಾಂಕ್ ಶ್ರೀವಾಸ್ತವ ಹೇಳಿದರು.