ಮುಂಬೈ: ಬಾಂಬೆ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ಎರಡೂ ಕೂಡ ಶುಕ್ರವಾರದ ಆರಂಭದಲ್ಲೇ ಇಳಿಕೆ ಕಂಡಿದೆ.
ಷೇರುಪೇಟೆಯಲ್ಲಿ ಬೆಳಗ್ಗೆ ಕರಡಿ ಕುಣಿತ: ದಿನ ಆರಂಭದಲ್ಲೇ ಸೆನ್ಸೆಕ್ಸ್ 1,200 ಅಂಕ ಕುಸಿತ - ರಾಷ್ಟ್ರೀಯ ಷೇರು ವಿನಿಮಯ
ಶುಕ್ರವಾರದ ಆರಂಭದಲ್ಲೇ ಸೆನ್ಸೆಕ್ಸ್ 1,200 ಅಂಕ ಹಾಗೂ ನಿಫ್ಟಿ 274 ಪಾಯಿಂಟ್‌ಗಳ ಕುಸಿತವಾಗಿದೆ.
![ಷೇರುಪೇಟೆಯಲ್ಲಿ ಬೆಳಗ್ಗೆ ಕರಡಿ ಕುಣಿತ: ದಿನ ಆರಂಭದಲ್ಲೇ ಸೆನ್ಸೆಕ್ಸ್ 1,200 ಅಂಕ ಕುಸಿತ ensex sheds nearly 1,200 points](https://etvbharatimages.akamaized.net/etvbharat/prod-images/768-512-7581778-thumbnail-3x2-megha.jpg)
ಸೆನ್ಸೆಕ್ಸ್ 1,200 ಅಂಕ ಕುಸಿತ
32,348.10 ಅಂಕವಿದ್ದ ಬಿಎಸ್‌ಇ ಸೆನ್ಸೆಕ್ಸ್ 1,190.27 ಅಂಕಗಳಿಗೆ ಕುಸಿದಿದೆ. ಇನ್ನು ಎನ್‌ಎಸ್‌ಇ ನಿಫ್ಟಿ, 274 ಪಾಯಿಂಟ್‌ಗಳ ಕುಸಿತದೊಂದಿಗೆ 9,628ಕ್ಕೆ ತಲುಪಿದೆ.
ಲಾಕ್ಡೌನ್ ಬಳಿಕ ಮೊದಲ ಬಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ 11.45 ಗಂಟೆಗೆ ಜಿಎಸ್ಟಿ ಕೌನ್ಸಿಲ್ ಸಭೆ ನಡೆಸುತ್ತಿದ್ದು, ಇದಕ್ಕೂ ಮುನ್ನವೇ ಸೆನ್ಸೆಕ್ಸ್ 1,200 ಅಂಕ ಕುಸಿತ ಕಂಡಿದೆ.