ವಾಷಿಂಗ್ಟನ್:'ಮೇಕ್ ಇನ್ ಇಂಡಿಯಾ' ಅಭಿಯಾನದ ಮೂಲಕ ಭಾರತವು ಇತ್ತೀಚೆಗೆ ಆಮದು ಪರ್ಯಾಯ ಮಾರ್ಗಗಳಿಗೆ ಒತ್ತು ನೀಡುತ್ತಿದೆ. ಇದರಿಂದ ದ್ವಿಪಕ್ಷೀಯ ವ್ಯಾಪಾರ ಸಂಬಂಧ ಎದುರಿಸುತ್ತಿರುವ ಸವಾಲುಗಳನ್ನು ಅದು ಸಂಕ್ಷಿಪ್ತಗೊಳಿಸಿ ಹೊರಗೆಡವಿದೆ ಎಂದು ಬೈಡನ್ ಆಡಳಿತ ಯುಎಸ್ ಕಾಂಗ್ರೆಸ್ಗೆ ತಿಳಿಸಿದೆ.
ಅಮೆರಿಕ ರಫ್ತುದಾರರ ಮೇಲೆ ಪರಿಣಾಮ ಬೀರುವ ದೀರ್ಘಕಾಲದ ಮಾರುಕಟ್ಟೆ ಪ್ರವೇಶ ಅಡೆತಡೆ ಪರಿಹರಿಸಲು 2020ರ ಅವಧಿಯಲ್ಲಿ ಅಮೆರಿಕ ಭಾರತದ ಜತೆಗೆ ತನ್ನ ಸ್ನೇಹವನ್ನು ಮುಂದುವರೆಸಿದೆ ಎಂದು ಯುಎಸ್ ಟ್ರೇಡ್ ರೆಪ್ರೆಸೆಂಟೇಟಿವ್ (ಯುಎಸ್ಟಿಆರ್) ತನ್ನ 2021ರ ವ್ಯಾಪಾರ ನೀತಿ ಕಾರ್ಯಸೂಚಿ ಮತ್ತು 2020ರ ವಾರ್ಷಿಕ ವರದಿಯಲ್ಲಿ ಹೇಳಿದೆ.
ಭಾರತದ ದೊಡ್ಡ ಮಾರುಕಟ್ಟೆ, ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯತ್ತ ಪ್ರಗತಿಯು ಅನೇಕ ಅಮೆರಿಕದ ರಫ್ತುದಾರರಿಗೆ ಅತ್ಯಗತ್ಯ ಮಾರುಕಟ್ಟೆಯನ್ನಾಗಿ ಮಾಡಿದೆ. ವ್ಯಾಪಾರ ನಿರ್ಬಂಧಿತ ನೀತಿಗಳ ಸಾಮಾನ್ಯ ಮತ್ತು ಸ್ಥಿರವಾದ ಪ್ರವೃತ್ತಿಯ ದ್ವಿಪಕ್ಷೀಯ ವ್ಯಾಪಾರ ಬಂಧುತ್ವ ಸಾಮರ್ಥ್ಯದ ಪ್ರತಿಬಂಧಕವಾಗಿಸಿದೆ. ಆಮದು ಪರ್ಯಾಯಕ್ಕೆ ಇತ್ತೀಚಿಗೆ ಭಾರತ ಒತ್ತು ನೀಡಿದ ಮೇಕ್ ಇನ್ ಇಂಡಿಯಾ ಅಭಿಯಾನ, ದ್ವಿಪಕ್ಷೀಯ ವ್ಯಾಪಾರ ಸಂಬಂಧ ಎದುರಿಸುತ್ತಿರುವ ಸವಾಲುಗಳನ್ನು ನಿರೂಪಿಸಿದೆ ಎಂದು ಯುಎಸ್ಟಿಆರ್ ಕಾಂಗ್ರೆಸ್ಗೆ ನೀಡಿದ ವರದಿಯಲ್ಲಿ ತಿಳಿಸಿದೆ.
ಜಿಎಸ್ಟಿ ಮಾರುಕಟ್ಟೆ ಪ್ರವೇಶ ಮಾನದಂಡದ ಜತೆಗೆ ಭಾರತದ ಅನುಸರಿಸುತ್ತಿರುವ ನೀತಿಗಳ ಬಗೆಗಿನ ಕಳವಳ ಪರಿಶೀಲನೆಯ ನಂತರ, 2019ರ ಜೂನ್ 5ರಿಂದ ಸಾಮಾನ್ಯ ಪದ್ಧತಿಯ ಆದ್ಯತೆಗಳ (ಜಿಎಸ್ಟಿ) ಕಾರ್ಯಕ್ರಮದಡಿ ಭಾರತದ ಅರ್ಹತೆಯನ್ನು ರದ್ದುಗೊಳಿಸಿತ್ತು.