ಕರ್ನಾಟಕ

karnataka

ETV Bharat / business

72 ವರ್ಷದ ಬರ್ನಾರ್ಡ್ ಅರ್ನಾಲ್ಟ್​ ಈಗ ವಿಶ್ವದ ನಂಬರ್ 1 ಶ್ರೀಮಂತ! - LVMH ಕಂಪೆನಿ

72 ವರ್ಷದ ಅರ್ನಾಲ್ಟ್​​​ ಫ್ಯಾಷನ್​ ಕಂಪನಿವೊಂದರ ಪ್ರಮುಖ ಹುದ್ದೆಯಲ್ಲಿದ್ದು, ಈ ಕಂಪನಿ ಸುಮಾರು 70 ಬ್ರ್ಯಾಂಡ್​​ ಹೊಂದಿದೆ ಎಂದು ತಿಳಿದು ಬಂದಿದೆ.

Bernard Arnault
Bernard Arnault

By

Published : Aug 6, 2021, 10:36 PM IST

Updated : Aug 6, 2021, 10:46 PM IST

ಹೈದರಾಬಾದ್​: 72 ವರ್ಷದ ಫ್ಯಾಷನ್​ ಟೈಕೂನ್​​ ಆಗಿರುವ ಬರ್ನಾರ್ಡ್ ಅರ್ನಾಲ್ಟ್ ಇದೀಗ ವಿಶ್ವದ ನಂಬರ್​ 1 ಶ್ರೀಮಂತನಾಗಿದ್ದು, ಅಮೆಜಾನ್​ನ ಜೆಫ್​ ಬೆಜೋಸ್ ಹಾಗೂ ಟೆಸ್ಲಾದ ಎಲಾನ್ ಮಸ್ಕ್ ಅವರನ್ನ ಮೀರಿಸಿದ್ದಾರೆ. ಫೋರ್ಬ್ಸ್​​​ನ Real-Time Billionaires List ಪ್ರಕಾರ ಇವರ ಆಸ್ತಿಯ ಒಟ್ಟು ಮೌಲ್ಯ 199 ಬಿಲಿಯನ್​​ ಅಮೆರಿಕನ್ ಡಾಲರ್​(USD 199.8 billion(14.83 ಲಕ್ಷ ಕೋಟಿ ರೂ.) ಎಂದು ತಿಳಿದು ಬಂದಿದೆ.

72 ವರ್ಷದ ಅರ್ನಾಲ್ಟ್​​​ ಫ್ಯಾಷನ್​ ಕಂಪನಿಯೊಂದರ ಮುಖ್ಯ ಕಾರ್ಯನಿರ್ವಾಹಕ (Chief Executive)ಹುದ್ದೆಯಲ್ಲಿದ್ದು, ಇದು 70 ಬ್ರ್ಯಾಂಡ್​​ ಹೊಂದಿದೆ ಎಂದು ತಿಳಿದು ಬಂದಿದೆ. ವಿಶ್ವದ ನಂಬರ್​ 1 ಶ್ರೀಮಂತರಾಗಿದ್ದ ಬೆಜೋಸ್​ ರಿಯಲ್ ಟೈಮ್​ ಅವರ ಆಸ್ತಿ 194.9ಬಿಲಿಯನ್​​ ಡಾಲರ್(14.46 ಲಕ್ಷ ಕೋಟಿ ರೂ.) ಆಗಿದ್ದು, ಎಲಾನ್​ ಮಸ್ಕ್ ಅವರ ಆಸ್ತಿ ಮೌಲ್ಯ 185.5 ಬಿಲಿಯನ್​ ಡಾಲರ್(13.76 ಲಕ್ಷ ಕೋಟಿ ರೂ.)​ ಆಗಿದೆ.

ಕೊರೊನಾ ವೈರಸ್ ಸಂದರ್ಭದಲ್ಲಿ ಈ ಕಂಪನಿಗೆ ಆದಾಯದಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಆದಾಯದ ಶೇ. 10ರಷ್ಟು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: ಅಕ್ಟೋಬರ್‌ನಲ್ಲಿ ಕೊವಾವ್ಯಾಕ್ಸ್‌ ಲಸಿಕೆ ; ಮಕ್ಕಳಿಗೆ ಬಳಕೆ ಯಾವಾಗ?

ಈ ವರ್ಷದ ಆರಂಭದಲ್ಲಿ ಅಮೆರಿಕದ ಆಭರಣ ತಯಾರಿಕಾ ಕಂಪನಿ ಟಿಫಾನಿ ಅಂಡ್ ಕೋ ಜತೆಗೆ 15.8 ಬಿಲಿಯನ್ ಅಮೆರಿಕನ್ ಡಾಲರ್​ ಒಪ್ಪಂದ ಕೂಡ ಮಾಡಿಕೊಂಡಿದ್ದು, ಅತಿ ದೊಡ್ಡ ವಿಲಾಸಿ ಬ್ರ್ಯಾಂಡ್​ ಖರೀದಿ ವ್ಯವಹಾರವಾಗಿದೆ. LVMH 46 ಹೋಟೆಲ್​, ರೈಲುಗಳು ಮತ್ತು ಕ್ರೂಸ್ ಕೂಡ ಹೊಂದಿದೆ. 25 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ಬರ್ನಾರ್ಡ್ ಅರ್ನಾಲ್ಟ್​ 2019ರಲ್ಲಿ ಪತ್ನಿಗೆ ಡಿವೋರ್ಸ್​ ನೀಡಿದ್ದಾರೆ.

Last Updated : Aug 6, 2021, 10:46 PM IST

ABOUT THE AUTHOR

...view details