ಬೆಂಗಳೂರು :ಕಳೆದ ಎರಡು ವರ್ಷಗಳಿಂದ ಮಳೆ, ಪ್ರವಾಹ ಮತ್ತು ಭೂಕುಸಿತದ ಯಾತನೆ ಹಾಗೂ ಇತ್ತೀಚಿನ ಕೋವಿಡ್-19 ಪ್ರೇರಿತ ಲಾಕ್‌ಡೌನ್ ರೊಮ್ಯಾಟಿಕ್ ಪಾನೀಯ ಕಾಫಿ ಬೆಳೆಗಾರರಿಗೆ ಹೊಸ ಬಿಕ್ಕಟ್ಟು ತಂದಿಟ್ಟಿದೆ.
ಕಳೆದ 2 ವರ್ಷಗಳಲ್ಲಿ ನಾವು ಕಾಫಿ ತೋಟಗಳಲ್ಲಿ ಪ್ರವಾಹ ಮತ್ತು ಭೂಕುಸಿತದ ಆಘಾತ ಎದುರಿಸಿದ್ದೆವು. ಕೋವಿಡ್ನ ರಾಷ್ಟ್ರವ್ಯಾಪಿ ಲಾಕ್‌ಡೌನ್ ಕಾಫಿ ಬೆಳೆಯ ಕಾರ್ಯಾಚರಣೆಗೆ ದೊಡ್ಡ ಅಡ್ಡಿಯಾಗಿದೆ. ಜೊತೆಗೆ ಕಾಫಿ ಬೀಜಗಳನ್ನು ಹಾನಿಗೊಳಿಸಿ ನಮಗೆ ಭಾರಿ ನಷ್ಟ ಉಂಟುಮಾಡಿದೆ ಎಂದು ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಶಿರೀಶ್ ವಿಜಯೇಂದ್ರ ಐಎಎನ್‌ಎಸ್‌ಗೆ ತಿಳಿಸಿದರು.
ಮಾರ್ಚ್ 25ರಂದು ಹೇರಲಾದ ಲಾಕ್‌ಡೌನ್ ಅರೇಬಿಕಾ ಮತ್ತು ರೊಬಸ್ಟಾ ಕಾಫಿ ಬೆಳೆ ಹಿನ್ನೆಡೆಗೆ ಕಾರಣವಾಯಿತು. ಆ ಸಮಯದಲ್ಲೇ ಬೆಳೆಗೆ ಸಾಂಕ್ರಾಮಿಕ ರೋಗ ತಗುಲಿತು. ಬೆಳೆಗಾರರು ಮತ್ತು ವ್ಯಾಪಾರಿಗಳು ಕಾಫಿ ಬೀಜ ಹಾಗೂ ಪುಡಿ ರಫ್ತು ಮಾಡುವುದನ್ನೇ ಕಟ್ಟಿ ಹಾಕಿತ್ತು.
ಮೇ 3ರವರೆಗೆ ಲಾಕ್‌ಡೌನ್ ಹೇರಿ ಮೊದಲ ಎರಡು ಹಂತಗಳಲ್ಲಿ ಸಾರ್ವಜನಿಕ ಸಾರಿಗೆ ಸ್ಥಗಿತಗೊಳಿಸಿ ವಾಹನ ಸಂಚಾರ ನಿಷೇಧಿಸಲಾಯಿತು. ಬೆಳೆಗಾರರಿಗೆ ಬೀನ್ಸ್ ಮತ್ತು ಮೆಣಸಿನಂತಹ ಅಂತರ ಬೆಳೆ ಕೊಯ್ಲು ಮಾಡುವುದಕ್ಕೆ ಆಗಲಿಲ್ಲ. ಕಾರ್ಮಿಕರು ವಾರಗಳವರೆಗೆ ಎಸ್ಟೇಟ್‌ಗಳಿಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ ಎಂದು ವಿಜಯೇಂದ್ರ ನೆನಪಿಸಿಕೊಂಡರು.
ಕೊರೊನಾ ವೈರಸ್ ಸೋಂಕು ತಪ್ಪಿಸಲು ನೆರೆಯ ತಮಿಳುನಾಡು ಮತ್ತು ಕೇರಳದ ವಲಸೆ ಕಾರ್ಮಿಕರು ತಮ್ಮ ತವರಿಗೆ ಮರಳಿದ ನಂತರ, ಕೊಯ್ಲು ಮಾಡಿದ ಕಾಫಿ ಸಂಸ್ಕರಣೆಯ ಕೆಲಸಗಳ ಮೇಲೆ ಪರಿಣಾಮ ಬೀರಿತು. ಲಾಕ್‌ಡೌನ್ ನಿರ್ಬಂಧಗಳಿಂದ ತೋಟಗಳಲ್ಲಿನ ಕೆಲಸವು ಸ್ಥಗಿತಗೊಂಡಿತ್ತು. ಬೀನ್ಸ್ ಮಾರಾಟ, ಸಂಸ್ಕರಣೆ ಮತ್ತು ದೇಶಿಯ ರಫ್ತು ವ್ಯಾಪಾರ ಸಾಧ್ಯವಾಗದೆ ಬೆಳೆಗಾರರಿಗೆ ಆದಾಯದ ನಷ್ಟ ಎದುರಾಯಿತು ಎಂದು ವಿಷಾಧಿಸಿದರು.
21 ದಿನಗಳ ಮೊದಲ ಹಂತದ ಲಾಕ್‌ಡೌನ್‌ನ ನಂತರ ಕೃಷಿ ಕ್ಷೇತ್ರಕ್ಕೆ ಅನೇಕ ನಿರ್ಬಂಧಗಳನ್ನು ಸಡಿಲಿಸಲಾಯಿತು. ತೋಟಗಾರಿಕೆ ಬೆಳೆಗಳಾದ ಕಾಫಿ, ಟೀ, ರಬ್ಬರ್ ಮತ್ತು ಮಸಾಲೆಗಳು ವಾಣಿಜ್ಯ ಬೆಳೆಗಳೆಂದು ಪರಿಗಣಿಸಲ್ಪಟ್ಟಿವೆ. ಕೇಂದ್ರ ಅಥವಾ ರಾಜ್ಯಗಳಳು ತೆರಿಗೆ ಮತ್ತು ಇತರವುಗಳಿಂದ ವಿನಾಯಿತಿ ಪ್ರಯೋಜನ ಆಗಲಿಲ್ಲ.