ಕರ್ನಾಟಕ

karnataka

By

Published : Aug 11, 2020, 3:19 PM IST

ETV Bharat / business

ವಾಹನಗಳ ಸಾಲದ ಅವಧಿ ವಿಸ್ತರಣೆಗೆ ಬ್ಯಾಂಕ್​, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮೀನಮೇಷ!

ವಾಹನ ವಲಯದಲ್ಲಿ ಬೇಡಿಕೆ ಪುನರುಜ್ಜೀವನಗೊಳ್ಳುವುದು ವಿಳಂಬವಾಗುತ್ತಿದೆ ಎಂಬುದನ್ನು ಮುಂದಿಟ್ಟುಕೊಂಡು ಎನ್‌ಬಿಎಫ್‌ಸಿ ಹಾಗೂ ಬ್ಯಾಂಕ್​ಗಳು ವಾಣಿಜ್ಯ, ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳ ಮೇಲಿನ ಸಾಲ ಪಾವತಿ ಮುಂದೂಡಿಕೆಗೆ ಸಹಮತ ನೀಡುತ್ತಿಲ್ಲ. 'ಸಾಲದಾತರು ಹೆಚ್ಚಿನ ಪ್ರಮಾಣದಲ್ಲಿ ಚದುರಿದ್ದರೂ ವಾಹನ ಚಿಲ್ಲರೆ ವ್ಯಾಪಾರಕ್ಕೆ ನಗದು ಧನಸಹಾಯ ನೀಡುವ ಬಗ್ಗೆ ಎಚ್ಚರಿಕೆಯ ಹೆಜ್ಜೆ ಹಾಕುತ್ತಿದ್ದಾರೆ' ಎಂದು ಎಫ್‌ಎಡಿಎ ಹೇಳುತ್ತಿದೆ.

auto loans
ವಾಹನ ಸಾಲ

ಹೈದರಾಬಾದ್: ದೇಶದಲ್ಲಿ ಕೋವಿಡ್ -19ನಿಂದ ಉಂಟಾದ ಮಂದಗತಿಯ ಬೆಳವಣಿಗೆ ಮತ್ತು ಲಾಕ್​ಡೌನ್​ ಹೇರಿಕೆಯಿಂದ ಭಾರತದ ವಾಹನ ಚಿಲ್ಲರೆ ಉದ್ಯಮ ಬಳಲುತ್ತಿದೆ. ಬ್ಯಾಂಕ್​ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ವಾಹನಗಳಿಗೆ ಸಾಲ ಮರುಪಾವತಿ ಅವಧಿ ವಿಸ್ತರಿಸುವುದರಿಂದ ಹಿಂದೆ ಸರಿಯುತ್ತಿವೆ.

ವಾಹನ ವಲಯದಲ್ಲಿ ಬೇಡಿಕೆ ಪುನರುಜ್ಜೀವನಗೊಳ್ಳುವುದು ವಿಳಂಬವಾಗುತ್ತಿದೆ ಎಂಬುದನ್ನು ಮುಂದಿಟ್ಟುಕೊಂಡು ಎನ್‌ಬಿಎಫ್‌ಸಿ ಹಾಗೂ ಬ್ಯಾಂಕ್​ಗಳು ವಾಣಿಜ್ಯ, ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳ ಮೇಲಿನ ಸಾಲ ಪಾವತಿ ಮುಂದೂಡಿಕೆಗೆ ಸಹಮತ ನೀಡುತ್ತಿಲ್ಲ.

2020ರ ಜುಲೈ ಮಾಸಿಕದ ವಾಹನ ನೋಂದಣಿ ಡೇಟಾ ಬಿಡುಗಡೆ ಮಾಡಿದ ಭಾರತದ ವಾಹನ ಚಿಲ್ಲರೆ ಉದ್ಯಮದ ರಾಷ್ಟ್ರೀಯ ಸಂಸ್ಥೆ ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್‌ಎಡಿಎ), ಸಾಲದಾತರು ಹೆಚ್ಚಿನ ಪ್ರಮಾಣದಲ್ಲಿ ಚದುರಿದ್ದರೂ ವಾಹನ ಚಿಲ್ಲರೆ ವ್ಯಾಪಾರಕ್ಕೆ ನಗದು ಧನಸಹಾಯ ನೀಡುವ ಬಗ್ಗೆ ಎಚ್ಚರಿಕೆಯ ಹೆಜ್ಜೆ ಹಾಕುತ್ತಿದ್ದಾರೆ ಎಂದು ಹೇಳಿದೆ.

ವಾಹನಗಳ ನಿಧಿಯ ಶೇಕಡಾವಾರು ಪ್ರಮಾಣವು ಅನೇಕ ವಿಭಾಗಗಳಲ್ಲಿ 10-15 ಪ್ರತಿಶತಷ್ಟು ಕುಸಿದಿದೆ. ಖರೀದಿ ಉದ್ದೇಶ ಹೊಂದಿದ್ದರೂ ಸಹ ಅನೇಕ ಗ್ರಾಹಕರನ್ನು ತಲುಪುವ ಆರಂಭಿಕ ಕೊಡುಗೆ ಹೆಚ್ಚಾಗುತ್ತಿದೆ ಎಂದಿದೆ.

ವಾಹನ ನೋಂದಣಿ ಜುಲೈನಲ್ಲಿ ಶೇ.36ರಷ್ಟು ಇಳಿದು 1.14 ದಶ ಲಕ್ಷಕ್ಕೆ ತಲುಪಿದೆ. ತ್ರಿಚಕ್ರ ಮತ್ತು ವಾಣಿಜ್ಯ ವಾಹನಗಳು ಸಂಖ್ಯೆ ಅತ್ಯಧಿಕವಾಗಿದೆ. ಆ ತಿಂಗಳಲ್ಲಿ ನೋಂದಣಿಯು ಕ್ರಮವಾಗಿ ಶೇ.74ರಷ್ಟು ಮತ್ತು ಶೇ.72ರಷ್ಟು ಕುಸಿದಿದೆ. ದ್ವಿಚಕ್ರ ವಿಭಾಗವು ಶೇ.37.5ರಷ್ಟು ಕುಸಿತ ತೋರಿಸಿದೆ. ಆದರೆ ಪ್ರಯಾಣಿಕ ವಾಹನ ವಿಭಾಗವು ಶೇ.25.2ರಷ್ಟು ಕುಸಿದಿದೆ.

ಇದರ ಮಧ್ಯೆ ಆಶಾದಾಯಕ ಎಂಬುವಂತೆ ಟ್ರ್ಯಾಕ್ಟರ್ ನೋಂದಣಿ ಜುಲೈನಲ್ಲಿ ಶೇ.37.24ರಷ್ಟು ಬೆಳವಣಿಗೆ ತೋರಿಸಿದೆ. ದ್ರವ್ಯತೆ ಒಂದು ಸಮಸ್ಯೆಯಲ್ಲ, ಆದರೂ ಧನಸಹಾಯವು ತುಂಬಾ ಬಿಗಿಯಾಗಿದೆ. ನಿಷೇಧವನ್ನು ಆಯ್ಕೆ ಮಾಡಿಕೊಂಡು ಗ್ರಾಹಕರಿಗೆ ವಾಹನಗಳನ್ನು ಹಣಕಾಸು ಪಡೆಯುವುದು ಕಷ್ಟವೆಂದು ಎಫ್​ಎಡಿಎ ಉಪಾಧ್ಯಕ್ಷ ವಿಂಕೇಶ್ ಗುಲಾಟಿ 'ಈಟಿವಿ ಭಾರತ'ಕ್ಕೆ ತಿಳಿಸಿದರು.

ABOUT THE AUTHOR

...view details