ತಿರುವನಂತಪುರಂ:ಕೇರಳ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್ ಅವರು ಎರಡನೇ ಪಿಣರಾಯಿ ವಿಜಯನ್ ಸರ್ಕಾರದ ಮೊದಲ ಬಜೆಟ್ ಅನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
ಕೇರಳ ಬಜೆಟ್: ಕೋವಿಡ್ 2ನೇ ಪ್ಯಾಕೇಜ್‌ಗೆ ₹ 20,000 ಕೋಟಿ ಘೋಷಿಸಿದ ಪಿಣರಾಯಿ! - ಕೇರಳ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್
ಬಜೆಟ್ ಮಂಡಿಸಿದ ಅವರು ಆರೋಗ್ಯ ಮತ್ತು ಆಹಾರದ ಭದ್ರತೆ ನಮ್ಮ ಸರ್ಕಾರದ ಪ್ರಮುಖ ನೀತಿಯಾಗಿದೆ ಎಂದರು. ರಾಜ್ಯದಲ್ಲಿ ಕೋವಿಡ್ ಎದುರಿಸುತ್ತಿರುವ ಸವಾಲುಗಳನ್ನು ಮೆಟ್ಟಿನಿಲ್ಲಲು 20,000 ಕೋಟಿ ರೂ. ಎರಡನೇ ಕೋವಿಡ್ ಪ್ಯಾಕೇಜ್ ಘೋಷಿಸಿದರು. ಕೋವಿಡ್ ತಡೆಗಟ್ಟುವ ಚಟುವಟಿಕೆಗಳಿಗಾಗಿ 2,800 ಕೋಟಿ ರೂ. ತೆಗೆದಿರಸಲಿದ್ದಾರೆ.
ಕೆ ಎನ್ ಬಾಲಗೋಪಾಲ್
ಬಜೆಟ್ ಮಂಡಿಸಿದ ಅವರು ಆರೋಗ್ಯ ಮತ್ತು ಆಹಾರದ ಭದ್ರತೆ ನಮ್ಮ ಸರ್ಕಾರದ ಪ್ರಮುಖ ನೀತಿಯಾಗಿದೆ ಎಂದರು. ರಾಜ್ಯದಲ್ಲಿ ಕೋವಿಡ್ ಎದುರಿಸುತ್ತಿರುವ ಸವಾಲುಗಳನ್ನು ಮೆಟ್ಟಿನಿಲ್ಲಲು 20,000 ಕೋಟಿ ರೂ. ಎರಡನೇ ಕೋವಿಡ್ ಪ್ಯಾಕೇಜ್ ಘೋಷಿಸಿದರು. ಕೋವಿಡ್ ತಡೆಗಟ್ಟುವ ಚಟುವಟಿಕೆಗಳಿಗಾಗಿ 2,800 ಕೋಟಿ ರೂ. ತೆಗೆದಿರಸಲಿದ್ದಾರೆ.
ಎಲ್ಲರಿಗೂ ಉಚಿತ ಲಸಿಕೆ ನೀಡುವ ಗುರಿ
- 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲು 1,000 ಕೋಟಿ ರೂ. ವಿನಿಯೋಗ
- ಲಸಿಕೆ ತಯಾರಿಕೆಗೆ ಕೇರಳ ಪ್ರವೇಶ ಮಾಡಲಿದೆ
- ಲಸಿಕೆ ಸಂಶೋಧನಾ ಕೇಂದ್ರ ಸ್ಥಾಪಿಸಲು 10 ಕೋಟಿ ರೂ.
- ಕೋವಿಡ್ ಚಿಕಿತ್ಸಾ ಸಾಧನಗಳಿಗೆ 500 ಕೋಟಿ ರೂ.
- ಎಲ್ಲ ಸಿಎಚ್‌ಸಿಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ 10 ಪ್ರತ್ಯೇಕ ಹಾಸಿಗೆಗಳಿಗೆ 635 ಕೋಟಿ ರೂ. ಹಂಚಿಕೆ
- ಪ್ರತಿ ವೈದ್ಯಕೀಯ ಕಾಲೇಜಿನಲ್ಲಿ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ವಿಶೇಷ ಬ್ಲಾಕ್ ಇರುತ್ತದೆ
- ಎಲ್ಲ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್
- ರಾಜ್ಯವು ಹೊಸ ಆಮ್ಲಜನಕ ಘಟಕವನ್ನು ಪ್ರಾರಂಭಿಸುತ್ತದೆ
- ಕುಡುಂಬಶ್ರೀ ಮೂಲಕ 1000 ಕೋಟಿ ರೂ. ಫಲಾನುಭವಿಗಳು ಶೇ 4 ಬಡ್ಡಿ ದರದಲ್ಲಿ ಸಾಲ
- ರಬ್ಬರ್ ಸಬ್ಸಿಡಿ ಬಾಕಿ ಪಾವತಿ
- ಕರಾವಳಿ ಪ್ರದೇಶಗಳ ರಕ್ಷಣೆಗೆ 1500 ಕೋಟಿ ರೂ.
- ಪ್ರವಾಹ ಪರಿಹಾರಕ್ಕಾಗಿ ಸಮಗ್ರ 500 ಕೋಟಿ ರೂ.
- ವಿದ್ಯಾರ್ಥಿಗಳಿಗೆ 2 ಲಕ್ಷ ಲ್ಯಾಪ್‌ಟಾಪ್ ವಿತರಣೆ
- ಆನ್‌ಲೈನ್ ಕಲಿಕೆ ಬಲಪಡಿಸಲು 10 ಕೋಟಿ ರೂ.
- ಕೇರಳ ಬ್ಯಾಂಕ್ ಮೂಲಕ ರೈತರಿಗೆ 2,600 ಕೋಟಿ ರೂ. ಸಾಲ
- ಕರಾವಳಿ ಹೆದ್ದಾರಿಗೆ 6,500 ಕೋಟಿ ರೂ. ವಿನಿಯೋಗ
- 3,000 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸಿಎನ್‌ಜಿಯಾಗಿ ಪರಿವರ್ತಿಸಲು 100 ಕೋಟಿ ರೂ.
- ಸ್ಟಾರ್ಟ್ಅಪ್‌ಗಳಿಗೆ 100 ಕೋಟಿ ರೂ.
- ಆಹಾರ ಭದ್ರತೆಗಾಗಿ 1000 ಕೋಟಿ ರೂ.
- 5 ಕೃಷಿ ಉದ್ಯಾನಗಳ ಪ್ರಾರಂಭ
Last Updated : Jun 4, 2021, 4:26 PM IST