ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಸಾರ್ವಜನಿಕ ವಲಯದ ಬ್ಯಾಂಕ್ಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ (ಪಿಎಸ್‌ಬಿ) ಪರಿಶೀಲನಾ ಸಭೆ ನಡೆಸಿದಸರು.
ಮೇಲಾಧಾರ ರಹಿತ ತುರ್ತು ಸಾಲ ಯೋಜನೆಯಡಿ ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳಗಳಿಗೆ (ಎಂಎಸ್‌ಎಂಇ) ಸಾಲವನ್ನು ನಿರಂತರವಾಗಿ ನೀಡುತ್ತಲೇ ಇರಿ. ಅವುಗಳ ವ್ಯವಹಾರವನ್ನು ಬೆಂಬಲಿಸಿ ಎಂದು ಪಿಎಸ್ಬಿಗಳಿಗೆ ನಿರ್ಮಲಾ ಸೀತಾರಾಮನ್ ಅವರು ಸೂಚಿಸಿದರು.
ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿ, ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಬ್ಯಾಂಕ್ಗಳ ಮುಖ್ಯಸ್ಥರಿಗೆ ತಾಕೀತು ಮಾಡಿದರು. ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಕಚೇರಿಯು ತನ್ನ ಖಾತೆಯಲ್ಲಿ ಟ್ವೀಟ್ ಮಾಡಿದೆ.
ಪಿಎಸ್‌ಬಿಗಳು ಅನುಮೋದನೆ ಮತ್ತು ಅರ್ಹ ಎಂಎಸ್‌ಎಂಇಗಳನ್ನು ತಲುಪುವತ್ತ ಗಮನಹರಿಸುವುದನ್ನು ಮುಂದುವರಿಸಲಿ. ಇತರ ವ್ಯವಹಾರಗಳ ಸಾಲದ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಸಹ ಹೊಂದಿವೆ ಎಂದು ಬರೆದುಕೊಂಡಿದೆ.
ಆತ್ಮನಿರ್ಭರ ಭಾರತ ಪ್ಯಾಕೇಜ್ ಭಾಗವಾಗಿ ಘೋಷಿಸಲಾದ ತುರ್ತು ಸಾಲ ಸೌಲಭ್ಯವು ಎಂಎಸ್ಎಂಇಗಳಿಗೆ ಮಾತ್ರವಲ್ಲದೆ ಎಲ್ಲಾ ಕಂಪನಿಗಳಿಗೂ ಈ ಯೋಜನೆ ಒಳಗೊಳ್ಳುತ್ತದೆ ಎಂದು ಹಣಕಾಸು ಸಚಿವರು ಫಿಕ್ಕಿ ಸದಸ್ಯರಿಗೆ ಸ್ಪಷ್ಟಪಡಿಸಿದ ಒಂದು ದಿನದ ಬಳಿಕ ಈ ನಿರ್ದೇಶನ ಬಂದಿದೆ.
ಬ್ರಾಂಚ್ ಮಟ್ಟದಲ್ಲಿ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸಲು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್) ಫಾರ್ಮ್ ಮತ್ತು ಔಪಚಾರಿಕತೆ ಕನಿಷ್ಠ ಮಟ್ಟದಲ್ಲಿ ಇರಿಸಿಕೊಳ್ಳಬೇಕೆಂದು ಸೀತಾರಾಮನ್ ಅವರು ಬ್ಯಾಂಕ್ಗಳಿಗೆ ಸಲಹೆ ನೀಡಿದ್ದಾರೆ ಎಂದು ಮತ್ತೊಂದು ಟ್ವೀಟ್ ಮಾಡಿದೆ.