ಕರ್ನಾಟಕ

karnataka

By

Published : Feb 17, 2022, 9:11 AM IST

ETV Bharat / business

ಅತಿಥಿ ಉಪನ್ಯಾಸಗಳಿಂದ ಗಳಿಸಿದ ಆದಾಯಕ್ಕೂ ಜಿಎಸ್​ಟಿ

ಕೆಲವು ಕ್ಷೇತ್ರಗಳಲ್ಲಿ ಅತಿಥಿ ಉಪನ್ಯಾಸ ನೀಡಿ, ಗಳಿಸುವ ಆದಾಯವೂ ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಬರುತ್ತದೆ. ಇದಕ್ಕೆ ಶೇಕಡಾ 18ರಷ್ಟು ಜಿಎಸ್​ಟಿ ವಿಧಿಸಲಾಗುತ್ತದೆ ಎಂದು ಕರ್ನಾಟಕದ ಸುಧಾರಿತ ಆಡಳಿತ ಪ್ರಾಧಿಕಾರ ಹೇಳಿದೆ.

Karnataka  Authority for Advance Ruling on GST over Income earned from conducting guest lectures
ಕೆಲವು ಅತಿಥಿ ಉಪನ್ಯಾಸಗಳಿಂದ ಗಳಿಸಿದ ಆದಾಯ ಜಿಎಸ್​ಟಿ ವ್ಯಾಪ್ತಿಗೆ: ಕರ್ನಾಟಕ ಸುಧಾರಿತ ಆಡಳಿತ ಪ್ರಾಧಿಕಾರ

ಬೆಂಗಳೂರು:ಅತಿಥಿ ಉಪನ್ಯಾಸ ನೀಡಿ ಗಳಿಸುವ ಆದಾಯವೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವ್ಯಾಪ್ತಿಗೆ ಬರುತ್ತದೆ. ಅದರ ಮೇಲೆ ಶೇಕಡಾ 18ರಷ್ಟು ಜಿಎಸ್​ಟಿ ವಿಧಿಸಲಾಗುತ್ತದೆ ಎಂದು ಕರ್ನಾಟಕದ ಸುಧಾರಿತ ಆಡಳಿತ ಪ್ರಾಧಿಕಾರ (Authority for Advance Ruling) ತಿಳಿಸಿದೆ.

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಪ್ರಾಧ್ಯಾಪಕರಾಗಿರುವ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರು ಅತಿಥಿ ಉಪನ್ಯಾಸಗಳನ್ನು ನೀಡಿ ಆದಾಯ ಗಳಿಸುತ್ತಿದ್ದರು. ಈ ಆದಾಯದ ಮೇಲೆ ಜಿಎಸ್​ಟಿ ವಿನಾಯಿತಿ ಕೋರಲು, ಕೆಲವೊಂದು ಸ್ಪಷ್ಟನೆಗಳನ್ನು ಸುಧಾರಿತ ಆಡಳಿತ ಪ್ರಾಧಿಕಾರವನ್ನು ಕೇಳಿದ್ದರು.

ಅತಿಥಿ ಉಪನ್ಯಾಸಗಳನ್ನು ನಡೆಸಿ, ಗಳಿಸುವ ಆದಾಯ ಅಥವಾ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವಾಲಯಗಳು ನೀಡುವ ಸಂಶೋಧನಾ ತರಬೇತಿಗಳಲ್ಲಿ ಭಾಗವಹಿಸಿ, ಉಪನ್ಯಾಸ ನೀಡುವ ಮೂಲಕ ಗಳಿಸುವ ಆದಾಯ ಜಿಎಸ್​ಟಿ ವ್ಯಾಪ್ತಿಗೆ ಬರುತ್ತದೆಯೇ ಎಂಬ ಕುರಿತು ಸುಧಾರಿತ ಆಡಳಿತ ಪ್ರಾಧಿಕಾರಕ್ಕೆ ಸ್ಪಷ್ಟನೆ ಕೇಳಿ ಅರ್ಜಿ ಸಲ್ಲಿಸಲಾಗಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ಸುಧಾರಿತ ಆಡಳಿತ ಪ್ರಾಧಿಕಾರ, ಅತಿಥಿ ಉಪನ್ಯಾಸಗಳ ಮೇಲೆ ಗಳಿಸಿದ ಆದಾಯದ ಮೇಲೆ ಜಿಎಸ್​ಟಿ ವಿಧಿಸಲಾಗುತ್ತದೆ. ಆದರೆ ಯಾವ ರೀತಿಯ ಉಪನ್ಯಾಸ ಎಂಬುದನ್ನು ಆಧರಿಸಿ ಜಿಎಸ್​ಟಿ ವಿಧಿಸಲಾಗುತ್ತದೆ. ಒಂದು ವೇಳೆ ಕಲೆ, ಕ್ರೀಡೆ ಮತ್ತು ಸಂಸ್ಕೃತಿಯ ಬಗ್ಗೆ ಉಪನ್ಯಾಸಗಳನ್ನು ನೀಡಿದರೆ, ಆ ಆದಾಯದ ಮೇಲೆ ಜಿಎಸ್​ಟಿ ವಿನಾಯಿತಿ ನೀಡಲಾಗುತ್ತದೆ. ಆದರೆ ಅರ್ಜಿದಾರರು ಕಾನೂನು ಮತ್ತು ಕಾನೂನು ಅರಿವಿನ ಬಗ್ಗೆ ಅತಿಥಿ ಉಪನ್ಯಾಸಗಳನ್ನು ನೀಡುತ್ತಿದ್ದಾರೆ. ಆದ್ದರಿಂದ ಅವರ ಅತಿಥಿ ಉಪನ್ಯಾಸದ ಆದಾಯದ ಮೇಲೆ ಜಿಎಸ್​ಟಿ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಇದನ್ನೂ ಓದಿ:ಎಸ್​ಬಿಐಗಿಂತ ಹೆಚ್ಚಾಗಿ ಎಲ್​ಐಸಿಗೆ ಹರಿದು ಹೋಗುತ್ತಿದೆ ಭಾರತೀಯರ ಉಳಿತಾಯದ ಹಣ: ಯುಬಿಎಸ್ ವರದಿ

ವೃತ್ತಿಪರ, ತಾಂತ್ರಿಕ ಮತ್ತು ವ್ಯಾಪಾರ ಸೇವೆಗಳ ಅಡಿಯಲ್ಲಿ ನೀಡುವ ಉಪನ್ಯಾಸಗಳು ಶೇಕಡಾ 18ರಷ್ಟು ಜಿಎಸ್​ಟಿಗೆ ಒಳಪಟ್ಟಿರುತ್ತವೆ. ಆದರೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಕ್ಕೆ ಅಧೀನದಲ್ಲಿ ಬರುವ ಸಂಸ್ಥೆಗಳಿಗೆ ಒದಗಿಸಿದ ಸೇವೆಗಳಿಗೆ ಜಿಎಸ್​ಟಿ ಇರುವುದಿಲ್ಲ ಎಂದು ಇದೇ ವೇಳೆ ಸುಧಾರಿತ ಆಡಳಿತ ಪ್ರಾಧಿಕಾರ ಹೇಳಿದೆ.

ABOUT THE AUTHOR

...view details