ಕರ್ನಾಟಕ

karnataka

ETV Bharat / business

ಕೊರೊನಾ ಎಫೆಕ್ಟ್​: ಭಾರತದ ಉದ್ಯೋಗ ಮಾರುಕಟ್ಟೆಗೆ ಮಂಕು - ನಿಧಾನಗತಿಯ ಆರ್ಥಿಕತೆ

ಕೊರೊನಾ ಭೀತಿ ಜಗತ್ತಿನಾದ್ಯಂತ ಹರಡಿದೆ. ಬಹುತೇಕ ಎಲ್ಲ ವ್ಯಾಪಾರ, ವ್ಯವಹಾರಗಳು ಸ್ಥಗಿತಗೊಂಡಿದ್ದು, ಇದು ಆರ್ಥಿಕತೆಗೆ ಬಹುದೊಡ್ಡ ಹೊಡೆತ ನೀಡಿದೆ. ಕಾರ್ಪೊರೇಟ್‌ಗಳು ಲಾಕ್‌ಡೌನ್ ನಂತರದ ದಿನಗಳಿಗೆ ಎದುರುನೋಡುತ್ತಿದ್ದು, ಯೋಚಿಸಿ ನೋಡುವ ನೀತಿಗೆ ಮೊರೆಹೋಗಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

Job market
ಉದ್ಯೋಗ ಮಾರುಕಟ್ಟೆ

By

Published : Jun 9, 2020, 10:20 PM IST

ನವದೆಹಲಿ: ಮುಂದಿನ ಮೂರು ತಿಂಗಳಲ್ಲಿ ಕೇವಲ 5 ಪ್ರತಿಶತದಷ್ಟು ಕಂಪನಿಗಳು ಮಾತ್ರ ಹೆಚ್ಚಿನ ಸಿಬ್ಬಂದಿ ನೇಮಿಸಿಕೊಳ್ಳಲು ಯೋಜಿಸುತ್ತಿವೆ ಎಂಬುದು ಭಾರತದ ಉದ್ಯೋಗ ಮಾರುಕಟ್ಟೆಯ ಕಠೋರ ಸತ್ಯಾಂಶವಾಗಿದೆ.

ಭಾರತದಾದ್ಯಂತ 695 ಉದ್ಯೋಗದಾತರನ್ನು ಒಳಗೊಂಡ ಮ್ಯಾನ್‌ಪವರ್‌ಗ್ರೂಪ್ ಉದ್ಯೋಗ ಔಟ್‌ಲುಕ್ ಸಮೀಕ್ಷೆಯ ಪ್ರಕಾರ, ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿವ್ವಳ ಉದ್ಯೋಗ ಶೇ 5ರಷ್ಟಿದೆ. ಇದು 15 ವರ್ಷಗಳ ಹಿಂದೆ ಸಮೀಕ್ಷೆ ಆರಂಭ ಆದಾಗಿನಿಂದ ದುರ್ಬಲವಾಗಿದೆ.

ಸಂತಸದ ಸುದ್ದಿಯೆಂದರೇ 44 ರಾಷ್ಟ್ರಗಳ ಪೈಕಿ ನಾಲ್ಕು ಪ್ರಮುಖ ರಾಷ್ಟ್ರಗಳಲ್ಲಿ ಭಾರತವು ಸಕಾರಾತ್ಮಕ ನೇಮಕ ಪ್ರವೃತ್ತಿಯನ್ನು ಹೊಂದಿದೆ. ಇತರ ಮೂರು ರಾಷ್ಟ್ರಗಳೆಂದರೇ ಜಪಾನ್, ಚೀನಾ ಮತ್ತು ತೈವಾನ್. ಇವು 2020ರ ಜುಲೈನಿಂದ ಸೆಪ್ಟೆಂಬರ್​ವರೆಗೆ ಕ್ರಮವಾಗಿ ಶೇ 11, 3 ಮತ್ತು 3ರಷ್ಟು ನಿವ್ವಳ ಉದ್ಯೋಗ ಹೊಂದಿವೆ.

ಕಾರ್ಪೊರೇಟ್ ಇಂಡಿಯಾ ಆರ್ಥಿಕ ಕುಸಿತಕ್ಕೆ ಪ್ರತಿಕ್ರಿಯೆಯಾಗಿ ತನ್ನ ಉದ್ಯೋಗಿಗಳನ್ನು ತರ್ಕಬದ್ಧಗೊಳಿಸುತ್ತಿದೆ. ಲಾಕ್‌ಡೌನ್ ಬಳಿಕದ ಯುಗಕ್ಕೆ ಸಜ್ಜಾಗುತ್ತಿದ್ದು, ಕಾದು ನೋಡುವ ತಂತ್ರದ ಆಟವಾಗಿದೆ. ಇಲ್ಲಿ ಉದ್ಯಮಿಗಳು ಬೇಡಿಕೆಯ ಏರಿಕೆಯನ್ನು ನಿರೀಕ್ಷಿಸುತ್ತಾರೆ ಎಂದು ಮ್ಯಾನ್‌ಪವರ್‌ಗ್ರೂಪ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಗುಲಾಟಿ ಹೇಳಿದರು.

ಭಾರತವು ಆಶಾವಾದಿಯಾಗಿದೆ. ಸರ್ಕಾರದ ಆರ್ಥಿಕ ಪ್ಯಾಕೇಜ್ ಕ್ಷೇತ್ರಗಳಾದ್ಯಂತ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಬಹುದು. ದೇಶದ ಉದ್ಯೋಗ ಅನುಪಾತದ ಮೇಲೆ ಸರ್ಕಾರ ಸಹ ತನ್ನ ಗಮನವಿಟ್ಟಿದೆ. ಈ ಎರಡೂ ಅಂಶಗಳು ಈ ಹಣಕಾಸು ವರ್ಷದ ಅಂತ್ಯದ ಮೊದಲು ಉದ್ಯೋಗಾಕಾಂಕ್ಷಿಗಳಿಗೆ ಹೊಸ ಭರವಸೆಯ ಕಿರಣವನ್ನು ತರಬಹುದು.

ಉದ್ಯೋಗ ಮಾರುಕಟ್ಟೆಯನ್ನು ಮುನ್ನಡೆಸುವ ಕ್ಷೇತ್ರಗಳು ಗಣಿಗಾರಿಕೆ ಮತ್ತು ನಿರ್ಮಾಣ, ಹಣಕಾಸು, ವಿಮೆ ಮತ್ತು ರಿಯಲ್ ಎಸ್ಟೇಟ್ ಮುಂಚೂಣಿಯಲ್ಲಿವೆ.

ABOUT THE AUTHOR

...view details