ಕರ್ನಾಟಕ

karnataka

ETV Bharat / business

9.99% ಪಾಲು ಮಾರಾಟ ; ಫೇಸ್​ಬುಕ್​ನಿಂದ ₹43,574 ಕೋಟಿ ಪಡೆದ ಜಿಯೋ!! - ಜಿಯೋ ಪ್ಲಾಟ್​ಫಾರ್ಮ್

ಉದ್ಯಮ ಮೌಲ್ಯದಲ್ಲಿ 4.62 ಲಕ್ಷ ಕೋಟಿ ರೂಪಾಯಿಗಳಂತೆ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇ.9.99ರಷ್ಟು ಪಾಲನ್ನು ಫೇಸ್​ಬುಕ್​ ಪಡೆದುಕೊಂಡಿದೆ..

jio
ಜಿಯೋ

By

Published : Jul 8, 2020, 4:22 PM IST

ನವದೆಹಲಿ :9.99% ಸ್ಟೇಕ್​ ಸೇಲ್​ ಮಾಡುವ ಮೂಲಕ ಜಿಯೋ ಪ್ಲಾಟ್​ಫಾರ್ಮ್,​ ಫೇಸ್​ಬುಕ್​ನಿಂದ 43,574 ಕೋಟಿ ರೂ. ಹಣ ಪಡೆದುಕೊಂಡಿದೆ.

ರಿಲಯನ್ಸ್ ಜಿಯೋ ಮಾತೃಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್‌, ಕಂಪನಿಯ ಶೇ .9.99ರಷ್ಟು ಪಾಲಿಗೆ ಫೇಸ್‌ಬುಕ್ ಒಡೆತನದ ಜಾಧು ಹೋಲ್ಡಿಂಗ್ಸ್,ಎಲ್‌ಎಲ್‌ಸಿಯಿಂದ 43,574 ಕೋಟಿ ರೂ.ಗಳನ್ನು ಪಡೆದಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ಮಂಗಳವಾರ ತಿಳಿಸಿದೆ.

ಕಳೆದ ಏಪ್ರಿಲ್ 22ರಂದು ಜಿಯೋ ಪ್ಲಾಟ್‌ಫಾರ್ಮ್‌ ಮತ್ತು ಫೇಸ್‌ಬುಕ್ ಒಪ್ಪಂದ ಮಾಡಿಕೊಂಡಿತ್ತು. ಎಲ್ಲಾ ಅಗತ್ಯ ಅನುಮೋದನೆಗಳ ನಂತರ, ಕಂಪನಿಯ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್ ಲಿ. ಜಾಧು ಹೋಲ್ಡಿಂಗ್ಸ್, ಫೇಸ್‌ಬುಕ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ LLCಯಿಂದ 43,574 ಕೋಟಿ ರೂ. ಚಂದಾದಾರಿಕೆ ಮೊತ್ತವನ್ನು ಪಡೆದಿದೆ ಎಂದು ರಿಲಯನ್ಸ್​ ಕಂಪನಿ ತಿಳಿಸಿದೆ.

ಉದ್ಯಮ ಮೌಲ್ಯದಲ್ಲಿ 4.62 ಲಕ್ಷ ಕೋಟಿ ರೂಪಾಯಿಗಳಂತೆ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇ .9.99ರಷ್ಟು ಪಾಲನ್ನು ಫೇಸ್​ಬುಕ್​ ಪಡೆದುಕೊಂಡಿದೆ.

ABOUT THE AUTHOR

...view details