ನವದೆಹಲಿ: ಟೆಲಿಕಾಂ ವಲಯದಲ್ಲಿ ಬೃಹತ್ ಸಂಸ್ಥೆಯಾಗಿ ಬೆಳೆದಿರುವ ಜಿಯೋ ಸಂಸ್ಥೆ ತನ್ನ ಮೊಬೈಲ್ ಫೋನ್ ಸರಣಿಯ ಜಿಯೋ ಫೋನ್ ನೆಕ್ಸ್ಟ್ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಮುಂದಿನ ದೀಪಾವಳಿ ವೇಳೆಗೆ ಮಾರುಕಟ್ಟೆಯಲ್ಲಿ ಜಿಯೋಫೋನ್ ನೆಕ್ಸ್ಟ್ ಖರೀದಿಗೆ ಲಭ್ಯವಾಗಲಿದೆ ಎಂದು ಈ ಹಿಂದೆಯೇ ಸಂಸ್ಥೆ ತಿಳಿಸಿದೆ.
ಇದೀಗ ಜಿಯೋಫೋನ್ ನೆಕ್ಸ್ಟ್ನಲ್ಲಿ ಗೂಗಲ್ ಜಂಟಿ ಸಹಯೋಗದೊಂದಿಗೆ ‘ಪ್ರಗತಿ’ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿ ಪಡಿಸಿದ್ದು, ಈ ಓಎಸ್ನಿಂದಲೇ ಮೊಬೈಲ್ ಕಾರ್ಯನಿರ್ವಹಿಸಲಿದೆ ಎಂದು ಸಂಸ್ಥೆ ತಿಳಿಸಿದೆ. ಈ ಫೋನ್ನಲ್ಲಿ ಇನ್ಸ್ಸ್ಟಂಟ್ ಭಾಷಾಂತರ ತಂತ್ರಾಂಶ ಅಳವಡಿಲಾಗಿದ್ದು, ಭಾರತದಲ್ಲಿ ಯಾವ ಮೂಲೆಯಲ್ಲಾದರೂ ಈ ಫೋನ್ನಿಂದ ಅವರದ್ದೇ ಭಾಷೆಯಲ್ಲಿ ವ್ಯವಹರಿಸಬಹುದು ಎಂದು ಸಂಸ್ಥೆ ತಿಳಿಸಿದೆ.