ಕರ್ನಾಟಕ

karnataka

ETV Bharat / business

ಕೈ-ತೆನೆ ಸರ್ಕಾರ ಯುಪಿಎ-2ನ ಮುಂದುವರಿದ ಭಾಗ: ಅರುಣ್​​ ಜೇಟ್ಲಿ ವ್ಯಂಗ್ಯ

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸರಣಿ ಬರಹಗಳನ್ನು ಬರೆದುಕೊಂಡ ಜೇಟ್ಲಿ, 'ಕಾಂಗ್ರೆಸ್ ಮತ್ತು ಜೆಡಿಎಸ್​ನ ಪ್ರತಿಕ್ರಿಯೆ ಅಸಮಾನತೆಯ ಅನುಮಾನದ ಸೂಜಿ ಮನೆ ಹುಟ್ಟುಹಾಕುವಂತಿದೆ. ಯಾವುದೇ ರಾಜಕಾರಣಿ, ಯಾವುದೇ ಸಚಿವರನ್ನು ಶೋಧಿಸಿಲ್ಲ. ಆದರೂ ಪ್ರತಿಭಟನೆ ಏಕೆ ಮಾಡಬೇಕು' ಎಂದು ಪ್ರಶ್ನಿಸಿದ್ದಾರೆ.

ಐಟಿ ದಾಳಿ ಧರಣಿ

By

Published : Mar 30, 2019, 8:21 PM IST

ನವದೆಹಲಿ:ಜೆಡಿಎಸ್ ನಾಯಕರು, ಆಪ್ತರ ಮನೆ ಮೇಲೆ ಗುರುವಾರ ನಡೆದ ಐಟಿ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್​ ನಾಯಕರು ಬೆಂಗಳೂರಿನಲ್ಲಿ ನಡೆಸಿದ್ದ ಪ್ರತಿಭಟನೆ ಕುರಿತು ವಿತ್ತ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಐಟಿ ಅಧಿಕಾರಿಗಳು ಜೆಡಿಎಸ್​ ಮುಖಂಡರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್​ ಮುಖಂಡರು ಗುರುವಾರ ಬೆಂಗಳೂರಿನ ಆದಾಯ ತೆರಿಗೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು.

ಇದನ್ನು ಉಲ್ಲೇಖಿಸಿ, 'ಬೆಂಗಳೂರಿನಲ್ಲಿ ನಡೆದ ಘಟನೆ ಯುಪಿಎ-2 ಅವಧಿಯ ಪಠ್ಯಪುಸ್ತಕ ವಿಧಾನವಾಗಿದೆ: ಸರ್ಕಾರದ ಹಣ ಬಳಸಿ, ಗುತ್ತಿಗೆದಾರರ ಮತ್ತು ಫಲಾನುಭವಿಗಳ ಮೂಲಕ ತಮ್ಮ ಹಿತ ಕಾಪಾಡಿಕೊಳ್ಳುವುದು. ಅದನ್ನು ನಾಶ ಮಾಡುವಂತಹ ಅವಕಾಶ ಎದುರಾದಾಗ ಅದರ ಹೆಸರು ಹೇಳಿ ಸಹಾನುಭೂತಿ ಪಡೆಯುವುದು. ಇದೊಂದು ಪಾರದರ್ಶಕದಂತೆ ಕಾಣುವ ಸ್ವಯಂ ಸಾಧನೆಯ ಗುರಿಯಾಗಿದೆ. ಯುಪಿಎ ಕೂಡ ಇಂತಹ ಭ್ರಷ್ಟಾಚಾರದ ನಡೆ ಅನುಸರಿಸಿತ್ತು' ಎಂದು ರೂಪಕವಾಗಿ ಬರೆದುಕೊಂಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾದವರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಲೆಕ್ಕಪರಿಶೋಧನೆಯನ್ನು ರಾಜಕೀಯ ಪ್ರೇರಿತವಾಗಿ ವಿರೋಧಿಸಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಹಿಂದೆಂದೂ ನಡೆಯದಂತಹ ಅಭೂತಪೂರ್ವ ಘಟನೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್​ ಪ್ರತಿಕ್ರಿಯೆಯು ಸೂಜಿ ಮನೆಯ ಅಸಮತೋಲನದ ಅನುಮಾನ ಹುಟ್ಟುಹಾಕಿದೆ. ಸಚಿವರ ಸೋದರಳಿಯ ಪಿಡಬ್ಲ್ಯೂಡಿ ಗುತ್ತಿಗೆದಾರನಾಗಿದ್ದು, ಸ್ವಜನ ಪಕ್ಷಪಾತಕ್ಕೆ ಇಂಬು ನೀಡುವಂತಹ ಪ್ರಕರಣವಲ್ಲವೇ? ಮುಖ್ಯಮಂತ್ರಿ ಹಾಗೂ ಅವರೊಂದಿಗೆ ಸೇರಿ ಪ್ರತಿಭಟನೆ ನಡೆಸಿದ್ದವರು ಇದಕ್ಕೆ ಉತ್ತರ ನೀಡಬೇಕು ಎಂದು ಸವಾಲು ಹಾಕಿದ್ದಾರೆ.

ಜೆಡಿಎಸ್​- ಕಾಂಗ್ರೆಸ್​ ನಾಯಕರು, ಸಚಿವರ ಮನೆಗಳನ್ನು ಶೋಧಿಸಲಾಗಿದೆ ಎಂದು ಆರೋಪಿಸಿದ್ದಾರೆ. ಸಚಿವರ ಸೋದರಳಿಯನನ್ನೇ ಶೋಧಿಸಲಾಯಿತು ಎಂಬುದನ್ನು ಅತ್ಯುತ್ತಮವಾದ ಪುರಾವೆಯನ್ನು ಅವರೇ ನೀಡಿದ್ದಾರೆ. ಸೋದರಳಿಯನನ್ನೇ ಸರ್ಕಾರದ ಸಚಿವ ಎಂಬ ಧಾಟಿಯಲ್ಲಿ ಜೇಟ್ಲಿ ಬರೆದುಕೊಂಡಿದ್ದಾರೆ.

ರಾಜ್ಯಗಳ ವರ್ತನೆ ಒಕ್ಕೂಟ ವ್ಯವಸ್ಥೆಗೆ ಬೆದರಿಕೆಯಾಗಿದೆ ಎಂಬ ಪ್ರಶ್ನೆಗೆ, 'ಒಕ್ಕೂಟ ಎಂಬುದು ಕೇವಲ ರಾಜ್ಯಗಳ ಹಕ್ಕುಗಳಲ್ಲ. ಭಾರತದಲ್ಲಿನ ಎಲ್ಲ ರಾಜ್ಯಗಳು ಒಗ್ಗೂಡಿವೆ. ದೇಶದ ಭದ್ರತೆ, ಸಾರ್ವಭೌಮತ್ವ, ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ, ಗಡಿ ನಿರ್ವಹಣೆ, ಕಸ್ಟಮ್ ಚೆಕ್​ ಪಾಯಿಂಟ್​ಗಳು, ಆದಾಯ ತೆರಿಗೆ ಜಾರಿ ಸೇರಿದಂತೆ ಹಲವು ಸಾಂವಿಧಾನಿಕ ಅಧಿಕಾರಗಳು ಒಳಪಡುತ್ತವೆ ಎಂದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗುತ್ತಿದೆ ಎಂಬ ರಾಜ್ಯಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ABOUT THE AUTHOR

...view details