ಕರ್ನಾಟಕ

karnataka

ಗೂಗಲ್‌ನ ಪಿಕ್ಸೆಲ್ 3 ಸರಣಿ ಅಂತ್ಯ: ಪಿಕ್ಸೆಲ್ 4ರ ಆರಂಭ!

ಗೂಗಲ್ ಪಿಕ್ಸೆಲ್ ಸರಣಿಯ ಸ್ಮಾರ್ಟ್‌ಫೋನ್ ಪಿಕ್ಸೆಲ್ 4ಎಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈ ಹಿನ್ನೆಲೆ ಮಧ್ಯಮ ಶ್ರೇಣಿಯ ಸ್ಮಾರ್ಟ್​ಫೋನ್​ಗಳಾದ ಪಿಕ್ಸೆಲ್ 3ಎ ಮತ್ತು ಪಿಕ್ಸೆಲ್ 3ಎ ಎಕ್ಸ್ಎಲ್ ಉತ್ಪಾದನೆ ನಿಲ್ಲಿಸಲಿದೆ.

By

Published : Jul 4, 2020, 12:56 PM IST

Published : Jul 4, 2020, 12:56 PM IST

google
google

ಸ್ಯಾನ್​​ಫ್ರಾನ್ಸಿಸ್ಕೋ (ಯುಎಸ್):ಪಿಕ್ಸೆಲ್ 4ಎ ಬಿಡುಗಡೆಗೆ ಮುಂಚಿತವಾಗಿ ಗೂಗಲ್ ತನ್ನ ಮಧ್ಯಮ ಶ್ರೇಣಿಯ ಸ್ಮಾರ್ಟ್​ಫೋನ್​ಗಳಾದ ಪಿಕ್ಸೆಲ್ 3ಎ ಮತ್ತು ಪಿಕ್ಸೆಲ್ 3ಎ ಎಕ್ಸ್ಎಲ್ ಉತ್ಪಾದನೆಯನ್ನು ನಿಲ್ಲಿಸುವುದಾಗಿ ದೃಢಪಡಿಸಿದೆ.

ಇನ್ನು ಮುಂದೆ ಗೂಗಲ್ ಸ್ಟೋರ್​ನಲ್ಲಿ ಇವುಗಳು ಲಭ್ಯವಿರುವುದಿಲ್ಲ. ಆದರೆ ತರ್ಡ್ ಪಾರ್ಟಿ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟದಲ್ಲಿರುತ್ತವೆ ಎಂದು ಆಂಡ್ರಾಯ್ಡ್ ವರದಿ ಮಾಡಿದೆ.

"ಗೂಗಲ್ ಸ್ಟೋರ್ ತನ್ನೆಲ್ಲಾ ಪಿಕ್ಸೆಲ್ 3ಎ ಮೊಬೈಲ್​ಗಳನ್ನು ಈಗಾಗಲೇ ಮಾರಾಟ ಮಾಡಿ ಪೂರ್ಣಗೊಳಿಸಿದೆ. ಪಿಕ್ಸೆಲ್ 3ಎ ಖರೀದಿಸಲು ಇನ್ನೂ ಆಸಕ್ತಿ ಹೊಂದಿರುವ ಜನರಿಗೆ ಇದು ಕೆಲವು ಪಾಲುದಾರರಿಂದ ಲಭ್ಯವಿರುತ್ತದೆ. ಆದರೆ ಸರಬರಾಜು ಕೊನೆಗೊಂಡಿದೆ" ಎಂದು ಗೂಗಲ್ ವಕ್ತಾರರು ಉಲ್ಲೇಖಿಸಿದ್ದಾರೆ.

ಪ್ರಸ್ತುತ, ಪಿಕ್ಸೆಲ್ 4 ಮತ್ತು ಪಿಕ್ಸೆಲ್ 4 ಎಕ್ಸ್ಎಲ್ ಮಾತ್ರ ಲಭ್ಯವಿದೆ. ಪಿಕ್ಸೆಲ್ 4ಎ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಪಿಕ್ಸೆಲ್ 4ಎ, 6 ಜಿಬಿ ರ್ಯಾಮ್ ಮತ್ತು 64 ಜಿಬಿ ನಾನ್ ಎಕ್ಸ್ಪ್ಯಾಂಡೇಬಲ್ ಇಂಟರ್ನಲ್ ಸ್ಟೋರೇಜ್ ಹೊಂದಿರಲಿದೆ. ಇದು 5.81 ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದೆ. $399ಕ್ಕೆ ಗ್ರಾಹಕರ ಕೈಗೆಟುಕಲಿದೆ.

ABOUT THE AUTHOR

...view details