ಕರ್ನಾಟಕ

karnataka

ETV Bharat / business

ಬಂಪರ್​ ಆಫರ್​: HCL ಉದ್ಯೋಗಿಗಳಿಗೆ ಬೆಂಜ್ ಕಾರು ಗಿಫ್ಟ್! - HCL Benz car gift

ಕೋವಿಡ್ 19 ಸಾಂಕ್ರಾಮಿಕದ ಎರಡೂ ಅಲೆಗಳಲ್ಲೂ ಉದ್ಯೋಗಿಗಳನ್ನು ಉಳಿಸಿಕೊಳ್ಳುವಲ್ಲಿ ಎಚ್​ಸಿಎಲ್ ಸಂಸ್ಥೆ ಹೆಚ್ಚಿನ ಕಾಳಜಿ ವಹಿಸಿತ್ತು. ಇದೀಗ ಉದ್ಯೋಗಿಗಳ ಕೆಲಸವನ್ನು ಪ್ರೋತ್ಸಾಹಿಸಲು ಬೋನಸ್​​ ರೂಪದಲ್ಲಿ ಬೆಂಜ್ ಕಾರು ಗಿಫ್ಟ್ ಮಾಡುತ್ತಿದೆ.

HCL
ಎಚ್​ಸಿಎಲ್ ಸಂಸ್ಥೆ

By

Published : Jul 22, 2021, 11:52 AM IST

ಬೆಂಗಳೂರು:ಪ್ರಮುಖ ಐಟಿ ಸಂಸ್ಥೆ ಎಚ್​ಸಿಎಲ್ ತನ್ನ ಉದ್ಯೋಗಿಗಳ ಕೆಲಸವನ್ನು ಪ್ರೋತ್ಸಾಹಿಸಲು ಬೋನಸ್​​ ರೂಪದಲ್ಲಿ ಬೆಂಜ್ ಕಾರು ಗಿಫ್ಟ್ ಮಾಡುತ್ತಿತ್ತು. ಅದೇ ಯೋಜನೆಯನ್ನು ಪುನರ್​ ಆರಂಭಿಸಲು ಸಂಸ್ಥೆ ಮುಂದಾಗಿದೆ.


ಕೋವಿಡ್ 19 ಸಾಂಕ್ರಾಮಿಕದ ಎರಡೂ ಅಲೆಗಳಲ್ಲೂ ಉದ್ಯೋಗಿಗಳನ್ನು ಉಳಿಸಿಕೊಳ್ಳುವಲ್ಲಿ ಎಚ್​ಸಿಎಲ್ ಸಂಸ್ಥೆ ಹೆಚ್ಚಿನ ಕಾಳಜಿ ವಹಿಸಿತ್ತು. ಹೊಸ ನೇಮಕಾತಿಗೆ ಶೇ.20ಕ್ಕಿಂತ ಹೆಚ್ಚು ವೆಚ್ಚವಾಗಲಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆ ಜನಪ್ರಿಯ ಯೋಜನೆಯನ್ನು ಪುನಃ ಆರಂಭಿಸಿದೆ.

2013ರಲ್ಲಿ ಸಂಸ್ಥೆಯಲ್ಲಿ ಉತ್ತಮ ಕಾರ್ಯನಿರ್ವಹಣೆ ತೋರಿದ ಉದ್ಯೋಗಿಗಳಿಗೆ 50 ಮರ್ಸಿಡಿಸ್ ಬೆಂಜ್ ಕಾರುಗಳನ್ನು ಉಡುಗೊರೆ ನೀಡಲಾಗಿತ್ತು. ಆದರೆ, ಆನಂತರ ವಿಧಾನ ಸ್ಥಗಿತಗೊಳಿಸಲಾಗಿತ್ತು. ಆದರೆ, ಮತ್ತೊಮ್ಮೆ ಈ ರೀತಿ ಬೋನಸ್ ನೀಡಲು ಸಂಸ್ಥೆ ಮುಂದಾಗಿದೆ.

ಬದಲಿ ನೇಮಕಾತಿ ವೆಚ್ಚ ಶೇ 15-20ರಷ್ಟು ಅಧಿಕವಾಗಿದೆ. ಕೌಶಲ್ಯಕ್ಕೆ ತಕ್ಕಂತೆ ನೇಮಕಾತಿ ನಡೆದಿದೆ. ಜಾವಾ ಡೆವಲಪರ್ ನೇಮಕಕ್ಕೆ ತಗುಲುವ ವೆಚ್ಚಕ್ಕೆ ಕ್ಲೌಡ್ ವೃತ್ತಿಪರರನ್ನು ನೇಮಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 22,000 ಹೊಸ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಕಳೆದ ವರ್ಷ 15,600 ನೇಮಕ ಮಾಡಿಕೊಳ್ಳಲಾಗಿತ್ತು.

ಇನ್ನು ಮೂರು ವರ್ಷಗಳ ಕ್ಯಾಶ್ ಬೋನಸ್ ಯೋಜನೆ ಜಾರಿಗೊಳಿಸಲಾಗಿದೆ. ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಕೋವಿಡ್ ಕಾಲದಲ್ಲೂ ಬೋನಸ್ ನೀಡಲಾಗುತ್ತಿದೆ.

ABOUT THE AUTHOR

...view details