ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಈಶಾನ್ಯ ಭಾಗದಲ್ಲಿನ ಅಭಿವೃದ್ಧಿ ಯೋಜನೆಗಳಿಗೆ ನೆರವಾಗಲಿದೆ. ಈ ಪ್ರದೇಶದಲ್ಲಿನ ಮೂಲಸೌಕರ್ಯ ಯೋಜನೆಗಳ ಉತ್ತಮ ಸಾಧನೆಗಾಗಿ ಉಪಗ್ರಹ ಚಿತ್ರಣ ಮತ್ತು ಇತರ ತಂತ್ರಜ್ಞಾನವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಕೇಂದ್ರ ಬಾಹ್ಯಾಕಾಶ ಇಲಾಖೆ ಮತ್ತು ಪರಮಾಣು ಇಂಧನ ಸಚಿವಾಲಯದ ಹಾಗೂ ಈಶಾನ್ಯ ವಲಯ ಅಭಿವೃದ್ಧಿ ಖಾತೆಯ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಅಭಿವೃದ್ಧಿ ಯೋಜನೆಗಳಿಗಾಗಿ ಡೇಟಾ ಮ್ಯಾಪಿಂಗ್ ಮತ್ತು ಮಾಹಿತಿ ಹಂಚಿಕೊಳ್ಳುವಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಾಂಸ್ಥಿಕ ಒಳಗೊಳ್ಳುವಿಕೆ ಇಡೀ ದೇಶದಲ್ಲಿ ಇದು ಮೊದಲ ಬಾರಿಗೆ ನಡೆಯಲಿದೆ. ಈಶಾನ್ಯ ಪ್ರದೇಶದ ಅಭಿವೃದ್ಧಿ (ಡೊನರ್) ಸಚಿವಾಲಯದಿಂದ ಧನಸಹಾಯ ಪಡೆದ ಎಲ್ಲ ಎಂಟು ಈಶಾನ್ಯ ರಾಜ್ಯಗಳ 221 ತಾಣಗಳಲ್ಲಿ 67 ಯೋಜನೆಗಳನ್ನು ಇಸ್ರೋ ಈಗಾಗಲೇ ಮೇಲ್ವಿಚಾರಣೆ ಮತ್ತು ಜಿಯೋ - ಟ್ಯಾಗಿಂಗ್ ಮಾಡುತ್ತಿದೆ.
ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಇಸ್ರೋ ವಿಜ್ಞಾನಿಗಳು ಭಾಗವಹಿಸಿದ ಸಭೆಯಲ್ಲಿ ಪಾಲ್ಗೊಂಡು, ಈಶಾನ್ಯದ ಎಂಟು ರಾಜ್ಯಗಳ ಪೈಕಿ ಆರು ರಾಜ್ಯಗಳು ಈಗಾಗಲೇ ಇಸ್ರೋ ತನ್ನ ನಿರ್ದಿಷ್ಟ ಪ್ರಸ್ತಾಪಗಳನ್ನು ಕಳುಹಿಸಿದೆ. ಸಿಕ್ಕಿಂ ಮತ್ತು ಅಸ್ಸೋಂ ಕೂಡ ಶೀಘ್ರದಲ್ಲೇ ತಮ್ಮ ಪ್ರಸ್ತಾಪಗಳನ್ನು ಕಳುಹಿಸಲಿವೆ ಎಂದು ಸಚಿವರು ತಿಳಿಸಿದ್ದಾರೆ.