ಕರ್ನಾಟಕ

karnataka

ETV Bharat / business

ಕಾರ್, ದ್ವಿಚಕ್ರ ವಾಹನಗಳ ಥರ್ಡ್​​ ಪಾರ್ಟಿ ವಿಮಾ ರಕ್ಷಣೆ ಹಿಂತೆಗೆದುಕೊಂಡ ಐಆರ್‌ಡಿಎಐ - ದೀರ್ಘಾವಧಿಯ ಮೂರನೇ ವ್ಯಕ್ತಿಯ ವಿಮಾ ರಕ್ಷಣೆ

ಸುಪ್ರೀಂಕೋರ್ಟ್ ನಿರ್ಧಾರದ ಹಿನ್ನೆಲೆಯಲ್ಲಿ 2018ರ ಸೆಪ್ಟೆಂಬರ್‌ನಲ್ಲಿ ಪರಿಚಯಿಸಲಾದ ದೀರ್ಘಕಾಲೀನ ವಿಮಾ ರಕ್ಷಣೆ ಪ್ಯಾಕೇಜ್ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ಟೇಕ್ ​ಹೋಲ್ಡರ್ಸ್ ಕಳವಳ ವ್ಯಕ್ತಪಡಿಸಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಹಿಂತೆಗೆದುಕೊಳ್ಳುವುದಾಗಿ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಹೇಳಿದೆ.

insurance
insurance

By

Published : Jun 10, 2020, 1:27 PM IST

ನವದೆಹಲಿ: ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಹೊಸ ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ ಮೂರು / ಐದು ವರ್ಷಗಳ ದೀರ್ಘಾವಧಿಯ ಮೂರನೇ ವ್ಯಕ್ತಿಯ ವಿಮಾ ರಕ್ಷಣೆ ಹಿಂಪಡೆಯಲು ಐಆರ್​ಡಿಎಐ ನಿರ್ಧರಿಸಿದ್ದು, ಇದರಿಂದಾಗಿ ವಾಹನ ಮಾಲೀಕರಿಗೆ ವಿಮಾ ರಕ್ಷಣೆ ಕೈಗೆಟುಕುವ ದರದಲ್ಲಿ ದೊರಕಲಿದೆ.

ಸುಪ್ರೀಂಕೋರ್ಟ್ ನಿರ್ಧಾರದ ಹಿನ್ನೆಲೆಯಲ್ಲಿ 2018ರ ಸೆಪ್ಟೆಂಬರ್‌ನಲ್ಲಿ ಪರಿಚಯಿಸಲಾದ ದೀರ್ಘಕಾಲೀನ ವಿಮಾ ರಕ್ಷಣೆಯ ಪ್ಯಾಕೇಜ್ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ಟೇಕ್​ ಹೋಲ್ಡರ್ಸ್ ಕಳವಳ ವ್ಯಕ್ತಪಡಿಸಿರುವುದನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಹೇಳಿದೆ.

"ಹೊಸ ಕಾರುಗಳು ಮತ್ತು ಹೊಸ ದ್ವಿಚಕ್ರ ವಾಹನಗಳಿಗೆ ಕ್ರಮವಾಗಿ ಮೂರು ವರ್ಷ ಅಥವಾ ಐದು ವರ್ಷಗಳವರೆಗೆ ನೀಡಲಾದ ದೀರ್ಘಾವಧಿ ಪ್ಯಾಕೇಜ್ ಕವರ್‌ಗಳನ್ನು ಹಿಂಪಡೆಯಲು ಪ್ರಾಧಿಕಾರ ನಿರ್ಧರಿಸಿದೆ. ಇದು ಆಗಸ್ಟ್ 1, 2020 ರಿಂದ ಜಾರಿಗೆ ಬರಲಿದೆ" ಎಂದು ಐಆರ್‌ಡಿಎಐ ಹೇಳಿದೆ.

"ಹೆಚ್ಚಿನ ವಾಹನ ಮಾಲೀಕರಿಗೆ ಕೈಗೆಟುಕುವ ದರದಲ್ಲಿ ಪ್ಯಾಕೇಜ್ ನೀತಿಗಳ ಪರಿಷ್ಕರಣೆ ಮಾಡಲಾಗಿದ್ದು, ಇದು ಕೆಲವು ಸವಾಲುಗಳನ್ನು ಕೂಡಾ ಹೊಂದಿದೆ" ಎಂದು ಪ್ರಾಧಿಕಾರ ತಿಳಿಸಿದೆ.

ABOUT THE AUTHOR

...view details