ನವದೆಹಲಿ:ಭಾರತ ಮಾತ್ರವಲ್ಲದೇ ವಿಶ್ವದ ಅಗ್ರರಾಷ್ಟ್ರಗಳಲ್ಲಿ ಮಾರುಕಟ್ಟೆಯ ಮೇಲಿನ ಹಿಡಿತವನ್ನು ನಿಧಾನವಾಗಿ ಕಳೆದುಕೊಳ್ಳುತ್ತಿರುವ ಆ್ಯಪಲ್ ಕಂಪನಿ ತನ್ನ ಮುಂಬರುವ ಐಫೋನ್ ಮಾಡೆಲ್ ವಿಭಿನ್ನ ಪ್ರಸ್ತುತ ಪಡಿಸಲು ಮುಂದಾಗಿದೆ.
ಕಳೆದ ಕೆಲ ಸರಣಿಗಳಲ್ಲಿ ಐಫೋನ್ ಮೊಬೈಲ್ ಗಾತ್ರ ದೊಡ್ಡದಾಗಿತ್ತು. ಆದರೆ ಐಫೋನ್ 12 ಸರಣಿ ಈ ಹಿಂದಿನ ಸಣ್ಣ ಗಾತ್ರಕ್ಕೆ ಅಂದರೆ 5.4 ಇಂಚಿನಿಂದ 5.8 ಇಂಚು ಇರಲಿದೆ ಎಂದು ತಿಳಿದುಬಂದಿದೆ. ಐಫೋನ್ 4 ಹಾಗೂ ಐಫೋನ್ 5ರಷ್ಟೇ ಗಾತ್ರವಿರಲಿದೆ.