ನವದೆಹಲಿ:ಇಂಡಿಯನ್ ಆಯಿಲ್ ಕಾರ್ಪೊರೇಷನ್ನಂತಹ ಯಾವುದೇ ಸಾರ್ವಜನಿಕ ವಲಯದ ಸಂಸ್ಥೆಯು ಭಾರತ್ ಪೆಟ್ರೋಲಿಯಂ ಖರೀದಿಗೆ ಬಿಡ್ ಸಲ್ಲಿಸುವುದಿಲ್ಲ ಎಂದು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಶಿಪ್ಪಿಂಗ್ ಸಂಸ್ಥೆ ಎಸ್‌ಸಿಐ ಮತ್ತು ಆನ್‌ಲ್ಯಾಂಡ್ ಕಾರ್ಗೋ ಮೂವರ್ ಕಾನ್ಕಾರ್ನಲ್ಲಿನ ಸರ್ಕಾರದ ಪಾಲನ್ನು ಮಾರಾಟ ಮಾಡಲು ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (ಸಿಸಿಇಎ) ಅನುಮೋದನೆ ನೀಡಿತ್ತು. ಇದರ ಜೊತೆಗೆ ಆಯ್ದ ಕೆಲವು ಕೇಂದ್ರೀಯ ಸಾರ್ವಜನಿಕ ವಲಯದ ಉದ್ಯಮಗಳಲ್ಲಿನ (ಸಿಪಿಎಸ್‌ಇ) ಸರ್ಕಾರದ ಪಾಲನ್ನು ಶೇ 51ಕ್ಕಿಂತ ಕಡಿಮೆಗೊಳಿಸುವ ಪ್ರಸ್ತಾಪವನ್ನು ಅದು ಅಂಗೀಕರಿಸಿತ್ತು.