ಕರ್ನಾಟಕ

karnataka

ETV Bharat / business

ಜುಲೈ ವೇಳೆಗೆ ಆಯ್ದ ಮಾರ್ಗಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ಹಾರಾಟ ಸಾಧ್ಯತೆ - Vande Bharat Mission

ಜುಲೈ ವೇಳೆಗೆ ದೆಹಲಿ-ನ್ಯೂಯಾರ್ಕ್, ಮುಂಬೈ-ನ್ಯೂಯಾರ್ಕ್, ದುಬೈ-ದೆಹಲಿ ಅಂತಾರಾಷ್ಟ್ರೀಯ ಮಾರ್ಗಗಳನ್ನು ಪುನರಾರಂಭಿಸುವ ಸಾಧ್ಯತೆಯಿದೆ. ಇಂಗ್ಲೆಂಡ್​, ಫ್ರಾನ್ಸ್ ಮತ್ತು ಜರ್ಮನಿಯ ಕೆಲವು ವಿಮಾನಯಾನ ಸಂಸ್ಥೆಗಳಿಗೆ ಭಾರತಕ್ಕೆ ಮತ್ತು ಹೊರ ಹೋಗುವ ವಿಮಾನಗಳ ನಿರ್ವಹಣೆಗೆ ಅವಕಾಶ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

International flights
ಅಂತಾರಾಷ್ಟ್ರೀಯ ವಿಮಾನ

By

Published : Jun 26, 2020, 5:02 PM IST

ನವದೆಹಲಿ:ಲಾಕ್​ಡೌನ್​ ಬಳಿಕ ಸ್ಥಗಿತಗೊಂಡಿರುವ ಅಂತಾರಾಷ್ಟ್ರೀಯ ವಿಮಾನ ಹಾರಾಟ ಸೇವೆಗಳು ಅನ್​ಲಾಕ್​ 2.0 ವೇಳೆ ಆಯ್ದ ಮಾರ್ಗಗಳಿಗೆ ಪುನಾರಂಭಗೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್ ಮತ್ತು ಇತರ ಕೆಲವು ದೇಶಗಳು ಏರ್ ಇಂಡಿಯಾದ ವಂದೇ ಭಾರತ ಮಿಷನ್​ಗೆ ಆಕ್ಷೇಪ ವ್ಯಕ್ತಪಡಿಸಿದ್ದವು. ಪ್ರಯಾಣಿಕರ ಸಾಗಣೆ ಸೇವೆಯಲ್ಲಿ ತಮ್ಮ ವಿಮಾನಗಳಿಗೆ ಅವಕಾಶ ನೀಡುವಂತೆ ವಿನಂತಿಸಿದ ನಂತರ ಹಿಂದಕ್ಕೆ ಸರಿದವು. ಇತ್ತೀಚಿನ ಸರ್ಕಾರಿ ಮೂಲಗಳ ಪ್ರಕಾರ, ಅನ್​ಲಾಕ್ 2.0 ಅಡಿಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಅವಕಾಶ ನೀಡಬಹುದು. ಅದು ಆಯ್ದ ಮಾರ್ಗಗಳಿಗೆ ಮಾತ್ರ ಸೀಮಿತವಾಗಲಿದೆ ಎಂದಿವೆ.

ಸರ್ಕಾರದ ಮೂಲಗಳ ಪ್ರಕಾರ, ಜೂನ್ 30ರ ಒಳಗೆ ಗೃಹ ಸಚಿವಾಲಯವು ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ. ಅನ್​ಲಾಕ್​ 2.0 ಮಾರ್ಗಸೂಚಿಗಳಲ್ಲಿ ಆಯ್ದ ಮಾರ್ಗಗಳಿಗೆ ಅಂತಾರಾಷ್ಟ್ರೀಯ ವಿಮಾನ ಸೇವೆ ಪುನಾರಂಭದ ಆದೇಶಗಳನ್ನು ಕಾಣಬಹುದು.

ಜುಲೈ ವೇಳೆಗೆ ದೆಹಲಿ-ನ್ಯೂಯಾರ್ಕ್, ಮುಂಬೈ-ನ್ಯೂಯಾರ್ಕ್, ದುಬೈ-ದೆಹಲಿ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನ ಹಾರಾಟ ಪುನಾರಂಭಿಸುವ ಸಾಧ್ಯತೆಯಿದೆ. ಇಂಗ್ಲೆಂಡ್​, ಫ್ರಾನ್ಸ್ ಮತ್ತು ಜರ್ಮನಿಯ ಕೆಲವು ವಿಮಾನಯಾನ ಸಂಸ್ಥೆಗಳಿಗೆ ಭಾರತಕ್ಕೆ ಮತ್ತು ಹೊರ ಹೋಗುವ ವಿಮಾನಗಳ ನಿರ್ವಹಣೆಗೆ ಅವಕಾಶ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ದೇಶಗಳಿಂದ ಪ್ರಯಾಣದ ಬೇಡಿಕೆ ಕಡಿಮೆಯಾಗದ ಕಾರಣ ಅಮೆರಿಕ, ಯುಕೆ, ಫ್ರಾನ್ಸ್ ಮತ್ತು ಜರ್ಮನಿಯೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಒಪ್ಪಂದ ಸ್ಥಾಪಿಸುವ ನಿರೀಕ್ಷೆಯನ್ನು ಸರ್ಕಾರ ಎದುರು ನೋಡುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ವಕ್ತಾರರು ಮಂಗಳವಾರ ಹೇಳಿದ್ದರು.

ವಿಶೇಷವೆಂದರೆ ಅಮೆರಿಕ, ಇಂಗ್ಲೆಂಡ್​, ಯುಎಇ, ಜರ್ಮನಿ, ಫ್ರಾನ್ಸ್, ಇಟಲಿ, ಜಮೈಕಾ ಮತ್ತು ಇತರೆ ಹಲವು ದೇಶಗಳು ಅಂತಾರಾಷ್ಟ್ರೀಯ ವಿಮಾನ ಯಾನಕ್ಕಾಗಿ ತಮ್ಮ ವಾಯುಪ್ರದೇಶವನ್ನು ಮುಕ್ತವಾಗಿರಿಸಿವೆ.

ABOUT THE AUTHOR

...view details