ಹೈದರಾಬಾದ್: ವಿಮೆ ನಿಯಂತ್ರಕ ಐಆರ್‌ಡಿಎಐ, 'ಆರೋಗ್ಯ ಸಂಜೀವಿನಿ ಪಾಲಿಸಿ'ಯ ಮಾನದಂಡಗಳನ್ನು ಮಾರ್ಪಡಿಸಿದೆ. ಕನಿಷ್ಠ 1 ಲಕ್ಷ ರೂ.ಗಿಂತ ಕಡಿಮೆ ಹಾಗೂ ಗರಿಷ್ಠ 5 ಲಕ್ಷ ರೂ.ಗೂ ಅಧಿಕ ಮೊತ್ತದ ಆರೋಗ್ಯ ವಿಮೆ ನೀಡಲು ಅವಕಾಶ ಕಲ್ಪಿಸಿದೆ.
'ಸ್ಟ್ಯಾಂಡರ್ಡ್ ಇಂಡಿವಿಜುವಲ್ ಹೆಲ್ತ್ ಇನ್ಸೂರೆನ್ಸ್ ಪ್ರೋಡಕ್ಟ್' ಮಾರ್ಗಸೂಚಿಗಳ ಪ್ರಕಾರ, ಸಾಮಾನ್ಯ ಮತ್ತು ಆರೋಗ್ಯ ವಿಮೆದಾರರಿಗೆ ಕನಿಷ್ಠ 1 ಲಕ್ಷ ರೂ.ಗಳಿಂದ ಗರಿಷ್ಠ 5 ಲಕ್ಷ ರೂ. ನೀಡಬಹುದಾಗಿದೆ. ಸಾಮಾನ್ಯ ಜನರಿಗೆ ಅನುಕೂಲ ಆಗುವಂತೆ ಮಾನದಂಡಗಳನ್ನು ಮಾರ್ಪಡಿಸಲಾಗಿದೆ ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಸುತ್ತೋಲೆಯಲ್ಲಿ ತಿಳಿಸಿದೆ.
ವಿಮಾದಾರರಿಗೆ ಕನಿಷ್ಠ 1 ಲಕ್ಷ ರೂ.ಗಿಂತ ಕಡಿಮೆ ವಿಮೆ ಮತ್ತು ಗರಿಷ್ಠ ಮೊತ್ತವನ್ನು 5 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ವಿಮೆದಾರರ ಅಂಡರ್ ರೈಟಿಂಗ್ ಪಾಲಿಸಿಗೆ ನೀಡಲು ಅನುಮತಿಸಲಾಗಿದೆ. ವಿಮೆ ಮಾಡಿದ ಮೊತ್ತ 50,000 ರೂ. ಇದ್ದರೆ ಮಾತ್ರ ನೀಡಲಾಗುವುದು ಎಂದು ಹೇಳಿದೆ.
ಮುಂಬೈ ಮೂಲದ ಹಣಕಾಸು ತಜ್ಞ ವೈರಲ್ ಭಟ್ ಈಟಿವಿ ಭಾರತ ಜೊತೆ ಮಾತನಾಡಿ, ವಿಮೆದಾರರ ಮೊತ್ತಕ್ಕೆ ಸಂಬಂಧಿಸಿದಂತೆ 'ಆರೋಗ್ಯ ಸಂಜೀವಿನಿ ಪಾಲಿಸಿ'ಯಲ್ಲಿ ಮಾರ್ಪಾಡು ಮಾಡಿದ್ದು, ವಿಮೆದಾರರಿಗೆ ಖಂಡಿತವಾಗಿಯೂ ಉತ್ತಮ ಪ್ರಯೋಜನ ಸಿಗಲಿದೆ. ಗ್ರಾಹಕರು ಹೆಚ್ಚಿನ ಆಯ್ಕೆಗಳನ್ನು ಮಾಡಿಕೊಳ್ಳಬಹುದು. ಅಗತ್ಯಕ್ಕೆ ತಕ್ಕಂತೆ ಸುರಕ್ಷಾ ವಿಧಾನದ ಮೊರೆ ಹೋಗಬಹುದು. ಈ ಕ್ರಮವು ವಿಮಾದಾರರಿಗೆ 50,000 ರೂ.ಗಳಿಂದ ಪ್ರಾರಂಭಿಸಿ ವ್ಯಾಪಕ ಶ್ರೇಣಿಯ ವಿಮೆ ನೀಡಲು ಅವಕಾಶ ನೀಡುತ್ತದೆ ಎಂದರು.
ವಿಮೆದಾರರು ಮಾರ್ಪಡಿಸಿದ ಪಾಲಿಸಿಯನ್ನು ಈ ತಕ್ಷಣದಿಂದ ಜಾರಿಗೆ ತರಬಹುದು. ಜನಪ್ರಿಯ ಆರೋಗ್ಯ ಸಂಜೀವಿನಿ ನೀತಿಯು ಆಸ್ಪತ್ರೆಗೆ ದಾಖಲು, ಪೂರ್ವ ಮತ್ತು ಬಳಿಕದ ಆಸ್ಪತ್ರೆಗೆ ದಾಖಲು, ಆಯುಷ್ ಚಿಕಿತ್ಸೆ ಮತ್ತು ಕಣ್ಣಿನ ಪೊರೆ ಚಿಕಿತ್ಸೆ ಸಹ ಒಳಗೊಂಡಿದೆ.