ಇತ್ತೀಚಿನ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟಿನಲ್ಲಿ ಭಾರತದ ಯುವ ದುಡಿಯುವ ಜನಸಂಖ್ಯೆ, ಅದರಲ್ಲೂ 20ರ ಹರೆಯದವರು ಆರ್ಥಿಕತೆಯಲ್ಲಿ ಉದ್ಯೋಗ ನಷ್ಟ ಅನುಭವಿಸಿದ್ದಾರೆ. ಇದು ಅತಿದೊಡ್ಡ ಆಘಾತವಾಗಿದೆ ಎಂದು ಇಂಡಿಪೆಂಡೆಂಟ್ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈ. ಲಿಮಿಟೆಡ್ ಹೇಳಿದೆ.
ಸಿಎಂಐಇ ದತ್ತಾಂಶವು ಭಾರತದಲ್ಲಿ 20 ವರ್ಷ ಮತ್ತು 29 ವರ್ಷ ವಯಸ್ಸಿನ ದುಡಿಯುವ ಜನರು, ಜುಲೈ 2020ರವರೆಗೆ ದೇಶದ ಒಟ್ಟು ಉದ್ಯೋಗ ನಷ್ಟದಲ್ಲಿ ಶೇ. 81ರಷ್ಟಿದ್ದಾರೆ ಎಂದು ಹೇಳುತ್ತದೆ. ಏಕೆಂದರೆ ಆರ್ಥಿಕತೆಯು ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮಂದಗತಿಯಲ್ಲಿ ಸಾಗಿದೆ.
ಸಿಎಂಐಇ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್, ಲಾಕ್‌ಡೌನ್ ಅವಧಿಯ ನಂತರ ಕಾರ್ಮಿಕರ ಭಾಗವಹಿಸುವಿಕೆಯ ದರದಲ್ಲಿ ತೀವ್ರ ಏರಿಕೆಯಾದರೂ ಸಹ ದೇಶದಲ್ಲಿ ನಿರುದ್ಯೋಗ ದರವು ಮುಂದುವರೆದಿದೆ ಎಂದಿದ್ದಾರೆ.
ಮೇ ತಿಂಗಳಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಸಣ್ಣ ಮಟ್ಟದಲ್ಲಿ ಸುಧಾರಣೆಯಾಗಿದೆ. ಆದರೆ ಇದು ಗಮನಾರ್ಹ ಸುಧಾರಣೆ ಎಂದರು. ಜೂನ್ನಲ್ಲಿ ಶೇ. 11ರಷ್ಟು ನಿರುದ್ಯೋಗ ದರವು ಲಾಕ್‌ಡೌನ್ ಮುಂಚಿನ ಶೇ. 8ಕ್ಕಿಂತ ಕಡಿಮೆ ದರಕ್ಕೆ ಹೋಲಿಸಿದರೆ ಸಾಕಷ್ಟು ಹೆಚ್ಚಾಗಿದೆ ಎಂದಿದ್ದಾರೆ.
ಯುವಜನರು ಉದ್ಯೋಗ ಕಳೆದುಕೊಳ್ಳುವ ಹಿಂದಿನ ಕಾರಣಗಳು