ಕರ್ನಾಟಕ

karnataka

ETV Bharat / business

ಭಾರತದ ಚಿಲ್ಲರೆ ವ್ಯಾಪಾರ: 100 ದಿನಗಳಲ್ಲಿ 15 ಲಕ್ಷ ಕೋಟಿ ರೂ. ನಷ್ಟ! - ಕೋವಿಡ್-19 ಬಿಕ್ಕಟ್ಟು

ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆ ದೇಶಾದ್ಯಂತ ವ್ಯಾಪಾರಿಗಳು ಹೆಚ್ಚು ನಷ್ಟಕ್ಕೆ ಒಳಗಾಗಿದ್ದಾರೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಹೇಳಿದೆ. ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಿಎಐಟಿ ಒತ್ತಾಯಿಸಿದೆ.

retail shop
retail shop

By

Published : Jul 20, 2020, 3:09 PM IST

ನವದೆಹಲಿ:ಕೋವಿಡ್-19 ಬಿಕ್ಕಟ್ಟು ಭಾರತದ ಆರ್ಥಿಕತೆಯ ಪ್ರತಿಯೊಂದು ವಲಯಕ್ಕೆ ತೀವ್ರ ಹೊಡೆತ ನೀಡುತ್ತಿದ್ದು, ದೇಶದ ಚಿಲ್ಲರೆ ವ್ಯಾಪಾರವು ಕಳೆದ 100 ದಿನಗಳಲ್ಲಿ ಸುಮಾರು 15.5 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದೆ.

ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆ ದೇಶಾದ್ಯಂತ ವ್ಯಾಪಾರಿಗಳು ಹೆಚ್ಚು ನಷ್ಟಕ್ಕೆ ಒಳಗಾಗಿದ್ದಾರೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಹೇಳಿದೆ.

"ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಬೆಂಬಲ ನೀತಿ ಇಲ್ಲದಿರುವುದು ವ್ಯಾಪಾರಿಗಳನ್ನು ಕಾಡುವ ಮತ್ತೊಂದು ನಿರ್ಣಾಯಕ ಅಂಶವಾಗಿದೆ" ಎಂದು ಸಿಎಐಟಿ ಹೇಳಿದೆ.

ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಭಾರತದ ಶೇಕಡಾ 20ರಷ್ಟು ಅಂಗಡಿಗಳನ್ನು ಮುಚ್ಚಬೇಕಾಗುತ್ತದೆ ಎಂದು ಸಿಎಐಟಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.

ABOUT THE AUTHOR

...view details