ಕರ್ನಾಟಕ

karnataka

ETV Bharat / business

ಕೋವಿಡ್​ ಅಬ್ಬರದ ನಡುವೆ ಭಾರತದ ಔಷಧ ಉದ್ಯಮದಲ್ಲಿ ಶೇ.59ರಷ್ಟು ಬೆಳವಣಿಗೆ - ಔಷಧೀಯ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಐಎಂಎಸ್ ಹೆಲ್ತ್‌

ಕೋವಿಡ್​ನೊಂದಿಗೆ ದೀರ್ಘಕಾಲದ ಚಿಕಿತ್ಸೆಗಳಲ್ಲೊಂದಾದ ಹೃದಯ ಸಂಬಂಧಿ ಚಿಕಿತ್ಸೆ ಕೂಡ ಶೇ. 22ರಷ್ಟು ಹೆಚ್ಚಾಗಿದೆ. ಸತತ 9 ತಿಂಗಳ ಕುಸಿತದ ನಂತರ ಶ್ವಾಸಕೋಶ ಸಂಬಂಧಿ ಚಿಕಿತ್ಸೆ ಕೂಡ ಏಪ್ರಿಲ್​ನಿಂದ ಶೇ.64ಕ್ಕೆ ಏರಿಕೆಯಾಗಿದೆ..

India's pharma industry grows 59% amid pandemic
ಕೋವಿಡ್​ ಅಬ್ಬರದ ನಡುವೆ ಭಾರತದ ಔಷಧ ಉದ್ಯಮದಲ್ಲಿ ಶೇ.59ರಷ್ಟು ಬೆಳವಣಿಗೆ

By

Published : May 15, 2021, 4:19 PM IST

ನವದೆಹಲಿ : ಕೊರೊನಾ ಎರಡನೇ ಅಲೆಯಿಂದಾಗಿ ಅನೇಕ ಕ್ಷೇತ್ರಗಳು ನಷ್ಟ ಅನುಭವಿಸುತ್ತಿವೆ. ಭಾರತದ ಔಷಧ ಉದ್ಯಮ ಮಾತ್ರ ಬೆಳವಣಿಗೆ ಕಾಣುತ್ತಿದೆ.

ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಔಷಧಿಗಳ ಮಾರಾಟದಲ್ಲಿ ಏರಿಕೆಯಾಗಿದೆ. ಹೀಗಾಗಿ, ಔಷಧ ಉದ್ಯಮದಲ್ಲಿ ಶೇ.59ರಷ್ಟು ಬೆಳವಣಿಗೆಯಾಗಿದೆ.

ವಿಶ್ವದ ಅತಿದೊಡ್ಡ ಔಷಧೀಯ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಐಎಂಎಸ್ ಹೆಲ್ತ್‌ನ ಮಾಹಿತಿಯ ಪ್ರಕಾರ, ಭಾರತೀಯ ಔಷಧ ಮಾರುಕಟ್ಟೆ (ಐಪಿಎಂ)ಯು ಈ ವರ್ಷದ ಮಾರ್ಚ್​ನಲ್ಲಿ ಶೇ.16ರಷ್ಟು ಹಾಗೂ ಏಪ್ರಿಲ್​ನಲ್ಲಿ ಶೇ.59ರಷ್ಟು ಏರಿಕೆ ಕಂಡಿದೆ.

ಇದನ್ನೂ ಓದಿ:ಜಿಯೋ ಗ್ರಾಹಕರಿಗೆ ಗುಡ್​ನ್ಯೂಸ್.. ತಿಂಗಳಿಗೆ 300 ನಿಮಿಷಗಳ ಕರೆ ಉಚಿತ..!

ಕೋವಿಡ್​ನೊಂದಿಗೆ ದೀರ್ಘಕಾಲದ ಚಿಕಿತ್ಸೆಗಳಲ್ಲೊಂದಾದ ಹೃದಯ ಸಂಬಂಧಿ ಚಿಕಿತ್ಸೆ ಕೂಡ ಶೇ. 22ರಷ್ಟು ಹೆಚ್ಚಾಗಿದೆ. ಸತತ 9 ತಿಂಗಳ ಕುಸಿತದ ನಂತರ ಶ್ವಾಸಕೋಶ ಸಂಬಂಧಿ ಚಿಕಿತ್ಸೆ ಕೂಡ ಏಪ್ರಿಲ್​ನಿಂದ ಶೇ.64ಕ್ಕೆ ಏರಿಕೆಯಾಗಿದೆ. ಈ ಎಲ್ಲದರ ಪರಿಣಾಮ ಔಷಧ ಕಂಪನಿಗಳಿಗೆ ಲಾಭವಾಗುತ್ತಿದೆ.

ಔಷಧಗಳನ್ನು ಹೆಚ್ಚು ಮಾರಾಟ ಮಾಡುತ್ತಿರುವ ಔಷಧ ಕಂಪನಿಗಳ ಪೈಕಿ ಡಿಆರ್‌ಎಲ್ ಮೊದಲ ಸ್ಥಾನದಲ್ಲಿದ್ದು, ಸಿಪ್ಲಾ, ಕ್ಯಾಡಿಲಾ, ಸನ್ ಫಾರ್ಮಾ, ಲುಪಿನ್, ಇಪ್ಕಾ ಲ್ಯಾಬ್ಸ್, ಗ್ಲೆನ್‌ಮಾರ್ಕ್,ಅರಿಸ್ಟೋ, ಮ್ಯಾಕ್‌ಲಿಯೋಡ್ಸ್ ಮತ್ತು ಅಲ್ಕೆಮ್ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.

ABOUT THE AUTHOR

...view details