ಕರ್ನಾಟಕ

karnataka

ETV Bharat / business

ಬಂಗಾರ ಪ್ರಿಯರಿಗೆ ಮತ್ತೊಂದು ಶಾಕಿಂಗ್​ ನ್ಯೂಸ್​​​​..! ಸತತ ಐದನೇ ದಿನ ಹಳದಿ ಲೋಹ ತುಟ್ಟಿ..! - ಚೀನಾ-ಅಮೆರಿಕ ವಾಣಿಜ್ಯ ಸಮರ

ಸತತ ಐದನೇ ದಿನ ಬಂಗಾರ ತುಟ್ಟಿಯಾಗಿದೆ. ಇಂದಿನ ಏರಿಕೆಯೊಂದಿಗೆ ಹತ್ತು ಗ್ರಾಂ ಚಿನ್ನದ ದರ 39,196ಕ್ಕೆ ಬಂದು ತಲುಪಿದೆ.

ಹಳದಿ ಲೋಹ

By

Published : Aug 26, 2019, 12:43 PM IST

ನವದೆಹಲಿ:ಬಂಗಾರದ ಬೆಲೆ ಏರುಗತಿಯ ಹಾದಿಯಲ್ಲೇ ಸಾಗುತ್ತಿದ್ದು ಪರಿಣಾಮ ಆಭರಣ ಪ್ರಿಯರ ಮೊಗದಲ್ಲಿ ಬೇಸರ ಮೂಡಿದೆ.

ಇಂದೂ ಸಹ ಚಿನ್ನದ ಬೆಲೆ ಏರಿಕೆಯಾಗಿದ್ದು, ಸತತ ಐದನೇ ದಿನ ಬಂಗಾರ ತುಟ್ಟಿಯಾಗಿದೆ. ಇಂದಿನ ಏರಿಕೆಯೊಂದಿಗೆ ಹತ್ತು ಗ್ರಾಂ ಚಿನ್ನದ ದರ 39,196ಕ್ಕೆ ಬಂದು ತಲುಪಿದೆ.

ಕಳೆದ ಮಂಗಳವಾರದಿಂದ ಹಳದಿ ಲೋಹದ ಬೆಲೆ ಏರಿಕೆಯಾಗುತ್ತಲೇ ಸಾಗುತ್ತಿದ್ದು ಇಂದಿನ ಹೆಚ್ಚಳದೊಂದಿದೆ ಹೊಸ ದಾಖಲೆಯನ್ನೆ ಬರೆದಿದೆ.

ಚಿನ್ನದ ಏರಿಕೆಯ ನಡುವೆ ಮತ್ತೊಂದೆಡೆ ಬೆಳ್ಳಿ ಸಹ ತುಟ್ಟಿಯಾಗಿದೆ. ಪ್ರಸ್ತುತ ಕೆ.ಜಿ. ಬೆಳ್ಳಿ ಬೆಲೆ 45,058 ಆಗಿದೆ.

ಪ್ರಸ್ತುತ ಚೀನಾ-ಅಮೆರಿಕ ನಡುವಿನ ವಾಣಿಜ್ಯ ಸಮರದ ಫಲವಾಗಿ ಭಾರತದಲ್ಲಿ ಚಿನ್ನದ ಬೆಲೆ ಆಕಾಶದತ್ತರಕ್ಕೆ ಜಿಗಿಯುತ್ತಿದೆ. ಡಾಲರ್ ಎದುರು ರೂಪಾಯಿ ಬೆಲೆ ಸಹ ಕುಸಿತವಾಗಿದ್ದು, ಈ ವರ್ಷದಲ್ಲೇ ಕನಿಷ್ಠ ಇಳಿಕೆ ಕಂಡಿದೆ.

ABOUT THE AUTHOR

...view details