ಮುಂಬೈ:ಸದೃಢವಾದ ಬಂಡವಾಳದ ಒಳ ಹರಿವಿನಿಂದಾಗಿ ಭಾರತದ ವಿದೇಶಿ ವಿನಿಮಯ ಸಂಗ್ರಹವು ದಾಖಲೆಯ ಮಟ್ಟವಾದ 600 ಶತಕೋಟಿ ಡಾಲರ್ ಮೀರಿರಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಪ್ರಸ್ತುತ ಅಂದಾಜಿನ ಆಧಾರದ ಮೇಲೆ ನಮ್ಮ ವಿದೇಶಿ ವಿನಿಮಯ ಸಂಗ್ರಹವು 600 ಬಿಲಿಯನ್ ಡಾಲರ್ ದಾಟಿರಬಹುದು ಎಂದು ನಾವು ನಂಬುತ್ತೇವೆ ಎಂದು ಎರಡನೇ ದ್ವಿ-ಮಾಸಿಕ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯ ಬಳಿಕ ಮಾಧ್ಯಮ ಪ್ರಕಟಣೆ ಹೊರಡಿಸಿ ತಿಳಿಸಿದ್ದಾರೆ.
ಇದು ಜಾಗತಿಕ ಸ್ಪಿಲ್‌ಓವರ್‌ಗಳನ್ನು ಎದುರಿಸಲು ನಮಗೆ ವಿಶ್ವಾಸವನ್ನು ನೀಡುತ್ತದೆ ಎಂದರು. ದ್ರವ್ಯತೆಯನ್ನು ಹೆಚ್ಚಿಸಲು ಕೋವಿಡ್-19 ಸಾಂಕ್ರಾಮಿಕದಿಂದ ಪ್ರಭಾವಿತವಾದ ವಿವಿಧ ಕ್ಷೇತ್ರಗಳಿಗೆ ವಿಶೇಷ ದ್ರವ್ಯತೆ ಸೌಲಭ್ಯ ಸೇರಿದಂತೆ ಹಲವು ಹಂತಗಳನ್ನು ಕೇಂದ್ರ ಬ್ಯಾಂಕ್ ಘೋಷಿಸಿತು.
ಕೇಂದ್ರೀಯ ಬ್ಯಾಂಕ್ ಜಿ-ಸೆಕೆಂಡ್ ಸ್ವಾಧೀನ ಕಾರ್ಯಕ್ರಮ (ಜಿ-ಎಸ್‌ಎಪಿ) 2.0 ಘೋಷಿಸಿತು. ಇದು ಹೂಡಿಕೆಗಳ ಮೇಲಿನ ವಾರ್ಷಿಕ ಲಾಭದ ಮೂಲ ಹೂಡಿಕೆಯ ಶೇಕಡಾವಾರು ಇಳುವರಿ ಶಾಂತಗೊಳಿಸಲು ಮತ್ತು ಸರ್ಕಾರಿ ಭದ್ರತಾ ಮಾರುಕಟ್ಟೆಯಲ್ಲಿ ಮಾರುಕಟ್ಟೆ ಭಾಗವಹಿಸುವವರು ಎದುರಿಸುತ್ತಿರುವ ಅನಗತ್ಯ ಚಂಚಲತೆ ನಿಯಂತ್ರಿಸಲು ನೆರವಾಗುತ್ತದೆ.