ಮುಂಬೈ: ಅಕ್ಟೋಬರ್ 22 ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 908 ಮಿಲಿಯನ್ ಡಾಲರ್‌ಗಳಷ್ಟು ಕುಸಿದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಅಂಕಿ - ಅಂಶಗಳ ಪ್ರಕಾರ, ವಿದೇಶಿ ವಿನಿಮಯ ಸಂಗ್ರಹವು ಅಕ್ಟೋಬರ್ 15ಕ್ಕೆ ಕೊನೆಗೊಂಡ ಹಿಂದಿನ ವಾರದಲ್ಲಿ $ 641.008 ಬಿಲಿಯನ್‌ನಿಂದ $ 640.100 ಬಿಲಿಯನ್ಗೆ ಕುಸಿದಿತ್ತು.
ಭಾರತದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ವಿದೇಶಿ ಕರೆನ್ಸಿ ಸ್ವತ್ತುಗಳು (FCAs), ಚಿನ್ನದ ಮೀಸಲುಗಳು, ವಿಶೇಷ ಡ್ರಾಯಿಂಗ್ ರೈಟ್ಸ್ (ಎಸ್‌ಡಿಆರ್) ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜೊತೆಗೆ ದೇಶದ ಮೀಸಲು ಸ್ಥಾನವನ್ನು ಒಳಗೊಂಡಿರುತ್ತದೆ.