ನವದೆಹಲಿ: ಪೆಟ್ರೋಲಿಯಂ ಉತ್ಪನ್ನ, ರತ್ನಾಭರಣ, ಚರ್ಮ ಮತ್ತು ಎಂಜಿನಿಯರಿಂಗ್ ಸರಕುಗಳ ಸಾಗಣೆ ಕುಸಿತದಿಂದಾಗಿ ಸೆಪ್ಟೆಂಬರ್‌ನಲ್ಲಿ ಧನಾತ್ಮಕ ಬೆಳವಣಿಗೆ ದಾಖಲಿಸಿದ ಭಾರತದ ರಫ್ತು, ಅಕ್ಟೋಬರ್‌ನಲ್ಲಿ ಶೇ. 5.12ರಷ್ಟು ಕುಸಿದು 24.89 ಬಿಲಿಯನ್ ಡಾಲರ್‌ಗೆ ತಲುಪಿದೆ.
ಶುಕ್ರವಾರದ ಬಿಡುಗಡೆಯಾದ ಅಂಕಿ-ಅಂಶಗಳ ಪ್ರಕಾರ, ಅಕ್ಟೋಬರ್‌ನಲ್ಲಿ ವ್ಯಾಪಾರ ಕೊರತೆಯು 8.71 ಶತಕೋಟಿ ಡಾಲರ್‌ಗೆ ಇಳಿದಿದ್ದು, ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ 11.75 ಬಿಲಿಯನ್ ಡಾಲರ್ ಆಗಿತ್ತು. 2020ರ ಅಕ್ಟೋಬರ್‌ನಲ್ಲಿ ಆಮದು 11.53ರಷ್ಟು ಕುಸಿದು 33.6 ಬಿಲಿಯನ್ ಡಾಲರ್‌ಗೆ (ವರ್ಷದಿಂದ ವರ್ಷಕ್ಕೆ) ತಲುಪಿದೆ.
ಅಕ್ಟೋಬರ್‌ನಲ್ಲಿ ಋಣಾತ್ಮಕ ಬೆಳವಣಿಗೆ ದಾಖಲಿಸಿದ ಪ್ರಮುಖ ರಫ್ತು ಸರಕುಗಳಲ್ಲಿ ಪೆಟ್ರೋಲಿಯಂ ಉತ್ಪನ್ನ (ಶೇ 52), ಗೋಡಂಬಿ (ಶೇ 21.57), ರತ್ನ ಮತ್ತು ಆಭರಣಗಳು (ಶೇ 21.27), ಚರ್ಮ (ಶೇ 16.67 ), ಕೈಮಗ್ಗದ ನೂಲು / ಬಟ್ಟೆಗಳು (ಶೇ 12.8), ಎಲೆಕ್ಟ್ರಾನಿಕ್ ಸರಕು (ಶೇ 9.4), ಕಾಫಿ (ಶೇ 9.2), ಸಾಗರ ಉತ್ಪನ್ನಗಳು (ಶೇ 8) ಮತ್ತು ಎಂಜಿನಿಯರಿಂಗ್ ಸರಕುಗಳು (ಶೇ 3.75) ಸೇರಿವೆ.